ಕನ್ನಡ ಸಾಹಿತ್ಯದ ಕಂಪನ್ನು ತಮ್ಮ ಚಿತ್ರಗಳ ಮೂಲಕ ಅತಿ ಹೆಚ್ಚು ಸೂಸಿದ ನಟ ಎಂದರೆ ಥಟ್ಟನೆ ಬರುವ ಉತ್ತರ ಡಾ.ರಾಜಕುಮಾರ್‌. ಅನೇಕ ಲೇಖಕರ ಕಾದಂಬರಿಗಳನ್ನು ಸಿನಿಮಾ ಮಾಡಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಖ್ಯಾತಿ ರಾಜ್‌ ಕುಮಾರ್‌ ಅವರಿಗೆ ಸಲ್ಲುತ್ತದೆ.

ಕನ್ನಡ ಚಿತ್ರರಂಗದ ಮೊದಲ ಕಾದಂಬರಿ ಆಧಾರಿತ ಚಿತ್ರ “ಕರುಣೆಯೇ ಕುಟುಂಬದ ಕಣ್ಣು’. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್‌ ನಟಿಸಿದ್ದಾರೆ. ಅವರ ಕೊನೆಯ ಚಿತ್ರ “ಶಬ್ಧವೇಧಿ’. ಅದು ಕೂಡಾ ಕಾದಂಬರಿಯನ್ನಾಧರಿಸಿತ್ತು.

ಒಳ್ಳೆಯ ಕಾದಂಬರಿಗಳನ್ನು ಸಿನಿಮಾ ಮಾಡುವಲ್ಲಿ ರಾಜ್‌ ಕುಮಾರ್‌ ತೋರಿಸುತ್ತಿದ್ದ ಆಸಕ್ತಿಯ ಪರಿಣಾಮ ಅನೇಕ ಕಾದಂಬರಿಗಳು ಸಿನಿಮಾಗಳಾದುವು. “ಕರುಣೆಯೇ ಕುಟುಂಬದ ಕಣ್ಣು’ “ಭೂದಾನ’,”ಕುಲವಧು’, “ಚಂದವಳ್ಳಿಯ ತೋಟ’, “ಸಂಧ್ಯಾ ರಾಗ’, “ಸರ್ವಮಂಗಳಾ’ ಹೀಗೆ 25ಕ್ಕೂ ಹೆಚ್ಚು ಚಿತ್ರಗಳು ಕಾದಂಬರಿಯನ್ನಾಧರಿಸಿವೆ.

ಡಾ. ರಾಜಕುಮಾರ್‌ ಅವರು ಕನ್ನಡ ನಾಡಿನ ಸಂಸ್ಕೃತಿಯನ್ನು ತಮ್ಮ ಚಿತ್ರದಲ್ಲಿ ತೋರಿಸುವುದರ ಜೊತೆಗೆ, ಕನ್ನಡ ಸಂಸ್ಕೃತಿಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಾ ಬಂದವರು. ಹಾಗಾಗಿ ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿ ಯಾಗಿ ಹೊರಹೊಮ್ಮಿದ್ದಾರೆ. ಆದರೆ, ಅವರು ಬರೀ ಸಾಂಸ್ಕೃತಿಕ ರಾಯಭಾರಿಯಷ್ಟೇ ಅಲ್ಲ, ಕಾದಂಬರಿಯನ್ನಾಧರಿಸಿದ ಚಿತ್ರಗಳ ಮೂಲಕ ಸಾಹಿತ್ಯಿಕ ರಾಯಭಾರಿಯೂ ಆಗಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More