ಊರ್ಫಿ ಜಾವೇದ್
‘ಬಿಗ್ ಬಾಸ್ ಓಟಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೇಮಸ್ ಆಗಿದ್ದ ನಟಿ ಊರ್ಫಿ ಜಾವೇದ್ ಅವರು ಚಿತ್ರ ವಿಚಿತ್ರ ಕಾಸ್ಟ್ಯೂಮ್ಗಳಿಂದ ಗಮನ ಸೆಳೆಯುತ್ತಿದ್ದಾರೆ. ಆದರೆ ನೆಟ್ಟಿಗರಿಗೆ ಇದು ಕೆಲವೊಮ್ಮೆ ಕಿರಿಕಿರಿ ಕೂಡ ಉಂಟು ಮಾಡುತ್ತಿದೆ. ಆ ಕಾರಣದಿಂದ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ದಿನಕ್ಕೊಂದು ಹಾಟ್ ವೇಷ ಧರಿಸಿ ಊರ್ಫಿ ಜಾವೇದ್ ಪೋಸ್ ನೀಡುತ್ತಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಗೆಬಗೆಯ ಫೋಟೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಜನರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಬಟ್ಟೆಗಳನ್ನು ನಾವೇ ಡಿಸೈನ್ ಮಾಡಿಕೊಳ್ಳುವ ಮೂಲಕ ಊರ್ಫಿ ಜಾವೇದ್ ಫೇಮಸ್ ಆಗಿದ್ದಾರೆ. ಕರಣ್ ಜೋಹರ್ ನಡೆಸಿಕೊಟ್ಟ ‘ಬಿಗ್ ಬಾಸ್ ಓಟಿಟಿ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯ ಒಳಗೆ ಕಾಲಿಟ್ಟಾಗಲೂ ಊರ್ಫಿ ಅದೇ ರೀತಿ ಮಾಡಿದ್ದರು. ದೊಡ್ಮನೆಯೊಳಗೆ ತಮ್ಮ ಇಷ್ಟದ ಪ್ರಕಾರ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಳ್ಳಲು ಅವರಿಗೆ ಎಲ್ಲ ಪರಿಕರಗಳು ಸಿಕ್ಕಿರಲಿಲ್ಲ. ಹಾಗಾಗಿ ಇರುವ ಕೆಲವು ವಸ್ತುಗಳನ್ನೇ ಬಳಸಿಕೊಂಡು ಅವರು ತಮ್ಮ ಕ್ರಿಯೇಟಿವಿಟಿ ತೋರಿಸುತ್ತಿದ್ದರು. ಅಚ್ಚರಿ ಎಂದರೆ ಅವರು ಕಸದ ಚೀಲವನ್ನು ಬಳಸಿಕೊಂಡು ತಮ್ಮ ಹೊಸ ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದರು.