ಚಂಡೀಗಢ: ಖ್ಯಾತ, ಫ್ಲೈಯಿಂಗ್ ಸಿಖ್ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್ ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.

ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಮಿಲ್ಕಾ ಸಿಂಗ್ ಅವರನ್ನು ಪಿಜಿಐಎಂಇಆರ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ಕೋವಿಡ್ ವರದಿ ನೆಗಟಿವ್ ಸಹ ಬಂದಿತ್ತು. ಆದ್ರೆ ಚಿಕಿತ್ಸೆ ಮುಂದುವರಿದಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಸುಮಾರು 11.30ಕ್ಕೆ ಕೊನೆಯುಸಿರೆಳದಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಮಿಲ್ಕಾ ಸಿಂಗ್ ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್ ಸಹ ಕೊರೊನಾಗೆ ಬಲಿಯಾಗಿದ್ದರು. ಮಿಲ್ಕಾ ಸಿಂಗ್ ಅವರಿಗೆ 91 ವರ್ಷ ವಯಸ್ಸಾಗಿತ್ತು. ಮಿಲ್ಕಾ ಅವರಿಗೆ ಓರ್ವ ಮಗ ಮತ್ತು ಮಗಳು ಇದ್ದಾರೆ. ಮಗ ಜೀವಾ ಮಿಲ್ಕಾ ಸಿಂಗ್ ಗಾಲ್ಫ್ ಆಟಗಾರರಾಗಿದ್ದಾರೆ.

ಮಿಲ್ಕಾ ಸಿಂಗ್ ಸಾಧನೆ:
* 1960ರ ರೋಮ್ ಒಲಿಂಪಿಕ್ಸ್ ನಲ್ಲಿ 400 ಮೀಟರ್ ಓಟದಲ್ಲಿ ನಾಲ್ಕನೇ ಸ್ಥಾನ
* 1956 ಮತ್ತು 1964ರ ಒಲಿಂಪಿಕ್ಸ್ ಭಾರತ ಪ್ರತಿನಿಧಿಸಿದ್ದರು.
* 1958 ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ
* ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಬಾರಿ ಚಿನ್ನದ ಪದಕ

The post ಅಥ್ಲಿಟ್ ಮಿಲ್ಕಾಸಿಂಗ್ ಇನ್ನಿಲ್ಲ appeared first on Public TV.

Source: publictv.in

Source link