‘ಅದನ್ನು ಮರೆತುಬಿಡಿ’; ‘ಜನ ಗಣ ಮನ’ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ | Just Enjoy the SIIMA Forgot Jana Gana Mana Says Vijay Devarakonda In SIIMA Award


‘ಜನ ಗಣ ಮನ’ ಸಿನಿಮಾಗಾಗಿ ಈಗಾಗಲೇ 8 ಕೋಟಿ ರೂಪಾಯಿಗೂ ಅಧಿಕ ವೆಚ್ಛ ಮಾಡಲಾಗಿದೆ. ಈ ಸಿನಿಮಾದ ಮುಹೂರ್ತ ನಡೆದಿತ್ತು. ಅಲ್ಲದೆ, ಕೆಲ ದೃಶ್ಯದ ಶೂಟಿಂಗ್ ಕೂಡ ಮಾಡಲಾಗಿತ್ತು. ಈಗ ಈ ಹಣವೂ ವ್ಯರ್ಥವಾಗಿದೆ.

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುವಲ್ಲಿ ವಿಫಲ ಆಗಿದೆ. ಈ ಸಿನಿಮಾ ವಿಮರ್ಶೆಯಲ್ಲೂ ಸೋತಿದೆ. ಅವರ ಜನಪ್ರಿಯತೆಗೆ ಈ ಸೋಲು ಸಾಕಷ್ಟು ಹೊಡೆತ ನೀಡಿದೆ. ವಿಜಯ್ ದೇವರಕೊಂಡ ಅವರು ಅಂದುಕೊಂಡ ಯಾವ ಜಾದೂ ಕೂಡ ಈ ಸಿನಿಮಾದಿಂದ ಆಗಿಲ್ಲ. ನಿರ್ದೇಶಕ ಪುರಿ ಜಗನ್ನಾಥ್ (Puri Jagannadh) ಅವರ ತಪ್ಪು ಲೆಕ್ಕಾಚಾರವೇ ಇದಕ್ಕೆಲ್ಲ ಕಾರಣ ಎಂದು ಅನೇಕರು ಆರೋಪಿಸಿದ್ದಿದೆ. ಈಗ ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿ ಬರಬೇಕಿದ್ದ ‘ಜನ ಗಣ ಮನ’ ಸಿನಿಮಾ ಮೇಲೂ ಈ ಸೋಲು ಪ್ರಭಾವ ಬೀರಿದೆ. ಈ ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯ್ ಉತ್ತರಿಸುವುದಕ್ಕೂ ನಿರಾಕರಿಸಿದ್ದಾರೆ.

‘ಲೈಗರ್’ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಅವರು ಈ ಚಿತ್ರಕ್ಕಾಗಿ ಮೂರ್ನಾಲ್ಕು ವರ್ಷ ಮೀಸಲಿಟ್ಟಿದ್ದರು. ಆದರೆ, ಈ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಇದು ವಿಜಯ್ ದೇವರಕೊಂಡ ಅವರಿಗೆ ಬೇಸರ ಮೂಡಿಸಿದೆ. ಈ ಕಾರಣಕ್ಕೆ ‘ಲೈಗರ್’ ಬಳಿಕ ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ‘ಸೈಮಾ’ ಅವಾರ್ಡ್ಸ್​​ಗೆ ವಿಜಯ್ ಆಗಮಿಸಿದ್ದರು. ಈ ವೇಳೆ ಮಾಧ್ಯಮವನ್ನು ಅವರು ಎದುರುಗೊಂಡರು.

‘ಲೈಗರ್’ ಬಳಿಕ ವಿಜಯ್ ಹಾಗೂ ಪುರಿ ಜಗನ್ನಾಥ್ ಅವರು ‘ಜನ ಗಣ ಮನ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಬೇಕಿತ್ತು. ಆದರೆ, ‘ಲೈಗರ್’ ಸೋತ ಕಾರಣ ‘ಜನ ಗಣ ಮನ’ ಸಿನಿಮಾ ಸೆಟ್ಟೇರುವುದಿಲ್ಲ ಎನ್ನಲಾಗಿತ್ತು. ಈ ಬಗ್ಗೆ ವಿಜಯ್​ಗೆ ಪ್ರಶ್ನೆ ಎದುರಾಗಿದೆ. ಆದರೆ, ಇವರು ಪ್ರಶ್ನೆಗೆ ಉತ್ತರಿಸಿಲ್ಲ.

‘ಜನ ಗಣ ಮನ ಸಿನಿಮಾ ಸೆಟ್ಟೇರುವುದಿಲ್ಲವಂತೆ ನಿಜವೇ?’ ಎಂದು ಮಾಧ್ಯಮದವರು ವಿಜಯ್​ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಿಜಯ್, ‘ಅದನ್ನೆಲ್ಲ ಮರೆತುಬಿಡಿ. ನಾವು ಇಲ್ಲಿ ಬಂದಿದ್ದು ಸೈಮಾ ಅವಾರ್ಡ್​ಗಾಗಿ. ಈ ಕಾರ್ಯಕ್ರಮವನ್ನು ಎಂಜಾಯ್ ಮಾಡೋಣ’ ಎಂದಿದ್ದಾರೆ ವಿಜಯ್. ಅವರ ಈ ಉತ್ತರ ಅನೇಕರಿಗೆ ಅಚ್ಚರಿ ಮೂಡಿಸಿದೆ.

TV9 Kannada


Leave a Reply

Your email address will not be published.