ಅದಿತಿ ಪ್ರಭುದೇವ ನಮ್ ಇಂಡಸ್ಟ್ರಿಯ ಮಹಾಲಕ್ಷ್ಮೀ ಎಂದ ‘ದುನಿಯಾ’ ವಿಜಯ್​ | Duniya Vijay Says Aditi prabhudeva Is a Mahalakshmi


‘ಮಮ್ಮಿ’, ‘ದೇವಕಿ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಿರ್ದೇಶಕ ಲೋಹಿತ್​ ಎಚ್​. ಅವರು ‘ಮಾಫಿಯಾ’ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಸಿನಿಮಾದ ತಾಂತ್ರಿಕ ವರ್ಗ ಉತ್ತಮವಾಗಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಟಗರು’, ‘ಸಲಗ’ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಗಮನ ಸೆಳೆದಿರುವ ಮಾಸ್ತಿ ಅವರು ‘ಮಾಫಿಯಾ’ ಚಿತ್ರಕ್ಕೂ ಡೈಲಾಗ್​ ಬರೆಯುತ್ತಿದ್ದಾರೆ. ತರುಣ್ ಅವರು ಕ್ಯಾಮರಾ ಕೆಲಸ ನಿಭಾಯಿಸಲಿದ್ದಾರೆ. ಇಂದು (ಡಿಸೆಂಬರ್​ 2) ಚಿತ್ರದ ಮುಹೂರ್ತ ನೆರವೇರಿತು. ದುನಿಯಾ ವಿಜಯ್​ ಅವರು ಆಗಮಿಸಿ ಚಿತ್ರತಂಡಕ್ಕೆ ಕ್ಲ್ಯಾಪ್​ ಮಾಡಿದರು. ಈ ವೇಳೆ ಅದಿತಿ ಅವರನ್ನು ಬಾಯ್ತುಂಬ ಹೊಗಳಿದರು.

TV9 Kannada


Leave a Reply

Your email address will not be published. Required fields are marked *