ಅದಿತಿ ಬರ್ತ್​​ಡೇಗೆ ಪುನೀತ್​ರನ್ನು ನೆನೆಯುವ ಸ್ಪೇಷಲ್​ ಗಿಫ್ಟ್​ ನೀಡಿದ ‘ಗಜಾನನ ಆಂಡ್​ ಗ್ಯಾಂಗ್​’ ಟೀಂ


ಶ್ಯಾನೆ ಟಾಪಗಿರೋ ಅದಿತಿ ಪ್ರಭುದೇವ ಪಾಲಿಗೆ ಇದೊಂದು ಅಪರೂಪದ ಘಳಿಗೆ. ತನ್ನ ಬರ್ತ್​ಡೇ ದಿನವೇ ಪಕ್ಕಾ ಪರ್ಫೆಕ್ಟ್ ಗರ್ಲ್​​​ ಅದಿತಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಠ ಸಿರಿಯಲ್ಲಿ ಮೂಡಿಬಂದಿರುವ ಹಾಡೊಂದರ ಗಿಫ್ಟ್ ಸಿಕ್ಕಿದೆ. ಹಾಗಾದ್ರೆ ಅದ್ಯಾವ ಹಾಡು? ಅದ್ಯಾವತ್ತೋ ಹಾಡಿದ್ದ ಹಾಡು ಇವತ್ತು ಹೇಗೆ ಅದಿತಿಗೆ ಜನ್ಮದಿನದ ಉಡುಗೊರೆ ಆಯ್ತು..?

ಅಬ್ಬಾ.. ಅಪ್ಪುಗೆ ಅಪ್ಪು ಅವರೇ ಸರಿ ಸಾಟಿ. ಅದೆಂಥಹ ನಿಸ್ವಾರ್ಥ ಜೀವನವನ್ನ ಸಾಗಿಸಿ ಹೋದರು ರಾಜರತ್ನ. ಅಪ್ಪು ಅಗಲಿಕೆಯಾಗಿ ಎರಡು ತಿಂಗಳು ಕಳೆದ್ರು ಅಪ್ಪು ಬಿತ್ತಿದ್ದ ಉಪಕಾರದ ಬೀಜಗಳು ಒಂದೊಂದಾಗಿಯೇ ಮೊಳಕೆ ಒಡೆದು ಪರೋಪಕಾರಿಯಾಗಿ ಬೆಳೆಯುತ್ತಿವೆ.

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಇದ್ದಾಗ ಅದೆಷ್ಟೋ ಕಲಾವಿದರು ತನ್ನ ಆತ್ಮೀಯರಿಗೆ ಬರ್ತ್​​​ಡೇ ದಿನ ಫೋನ್ ಮಾಡಿ ಸರ್ಪ್ರೈಸ್ ಗಿಫ್ಟ್​ಗಳನ್ನ ಕೊಟ್ಟು ಶುಭವಾಗಲಿ ಎಂದು ಹಾರೈಸುತ್ತಿದ್ದರು. ಆದ್ರೆ ಅಪ್ಪು ಅಗಲಿಕೆಯ ನಂತರ ನಟಿ ಅದಿತಿ ಪ್ರಭುದೇವ ಅವರಿಗೆ ಒಂದು ಗಿಫ್ಟ್ ಸಿಕ್ಕಿದೆ. ಅದು ಹಾರ್ಟ್ ಫುಲ್ ಸೋಲ್ ಫುಲ್ ಪವರ್ ಫುಲ್ ಗಿಫ್ಟ್ ಅಂತ ಹೇಳಬಹುದು.. ಅಷ್ಟು ಯಾವುದು ಆ ಗಿಫ್ಟ್ ಅನ್ನೊ ಪ್ರಶ್ನೆಗೆ ಉತ್ತರ ಈ ಹಾಡು..

ಅದಿತಿ ಜನ್ಮದಿನಕ್ಕೆ ಹೊರಬಂತು ಅಪ್ಪು ಗಾನ ಬಜಾನ
ಪುನೀತ್ ರಾಜ್ ಕುಮಾರ್ ಅವರು ಹೊಸಬರಿಗೆ ಅಭಿಮಾನದಿಂದ ಪ್ರೋತ್ಸಾಹಿಸೋದ್ರ ಜೊತೆಗೆ ಅಗತ್ಯ ಬಿದ್ದಲ್ಲಿ ಸಿನಿಮಾಕ್ಕೆ ಹಾಡಿ ಶಕ್ತಿಯನ್ನ ತುಂಬುತ್ತಿದ್ದರು. ಅದರಂತೆ ಮೊನ್ನೆಯ ಬರ್ತ್​​ಡೇ ಗರ್ಲ್ ಅದಿತಿ ಪ್ರಭುದೇವ ನಟನೆಯ ಗಜಾನನ ಆಂಡ್​ ಗ್ಯಾಂಗ್ ಸಿನಿಮಾದ ಹಾಡೊಂದಕ್ಕೆ ಪವರ್ ಫುಲ್ ಧ್ವನಿಯಾಗಿದ್ದಾರೆ. ಎಂದೋ ಅಪ್ಪು ಅಕ್ಕರೆಯಿಂದ ಹಾಡಿದ್ದ ಹಾಡು ಇವತ್ತು ಅದಿತಿ ಜನ್ಮದಿನಕ್ಕೆ ಉಡುಗೊರೆ ರೂಪದಲ್ಲಿ ಸಿಗುತ್ತಿದೆ.

ಗಜಾನನ ಆಂಡ್ ಗ್ಯಾಂಗ್.. ಪ್ರತಿಭಾವಂತ ಡೈರೆಕ್ಟರ್​​ ಅಭಿಷೇಕ್ ಶೆಟ್ಟಿ ನಿರ್ದೇಶನದ ನಾಗೇಶ್ ಕುಮಾರ್ ನಿರ್ಮಾಣದ ಹೊಸ ಸಿನಿಮಾ. ಈ ಹಿಂದೆ ಮೇಘನಾ ಅವರ ಬಳಿ ಟೀಸರ್ ರಿಲೀಸ್ ಮಾಡಿಸಿ ಪ್ರಚಾರದ ಪಡಸಾಲೆಯಲ್ಲಿ ಸೌಂಡ್ ಮಾಡಿದ ಗಜಾನನ ಆಂಡ್ ಗ್ಯಾಂಗ್ ಈಗ ಅಪ್ಪು ಅವರು ಹಾಡಿದ ಪೂರ್ತಿ ವಿಡಿಯೋ ಸಾಂಗ್ ಅನ್ನ ಚಿತ್ರಪ್ರೇಮಿಗಳಿಗೆ ಅರ್ಪಿಸಿದೆ.

ಅಪ್ಪು ಅವರ ಮಧುರಗಾಯನ ಸಿರಿಯನ್ನ ಪಡೆದಿರುವ ಗಜಾನನ ಆಂಡ್ ಗ್ಯಾಂಗ್ ಪುಣ್ಯವಂತರು. ಕೊರೊನಾ ಕಾಟ ಕಡಿಮೆ ಆಗಿ ಥಿಯೇಟರ್ ಅಂಗಳದಲ್ಲಿ ಪ್ರೇಕ್ಷಕರ ದಂಡು ಹೆಚ್ಚಾಗುವ ಕಾಲಕ್ಕೆ ಗಜಾನನ ಗ್ಯಾಂಗ್ ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದೆ.

News First Live Kannada


Leave a Reply

Your email address will not be published. Required fields are marked *