ನವದೆಹಲಿ: ಸಿಎಂ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ಸುಳಿವು ನೀಡಿದ್ದರ ಕುರಿತು ಸಂಸದೆ ಸುಮಲತಾ ಅಂಬರೀಶ್​​ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸುಮಲತಾ ಅಂಬರೀಶ್​​, ಸಿಎಂ ಬಿ.ಎಸ್​ ಯಡಿಯೂರಪ್ಪ ಬಹಳ ಪ್ರಬುದ್ಧ  ಹೇಳಿಕೆ ನೀಡಿದ್ದಾರೆ ಎಂದು ಹೊಗಳಿದರು.

ನಾನು ಸ್ವತಂತ್ರ ಸಂಸದೆ. ಹೀಗಾಗಿ ನಾನು ಯಾವ ಪಕ್ಷದ ಬೆಳವಣಿಗೆ ಬಗ್ಗೆ ಕಾಮೆಂಟ್​​ ಮಾಡೋದಿಲ್ಲ. ಬೇರೆ ಪಕ್ಷದ ಕಾಮೆಂಟ್​ ಮಾಡೋದು ಸರಿಯಿಲ್ಲ. ಆದರೆ, ಯಡಿಯೂರಪ್ಪ ಮಾಡಿದ ಟ್ವೀಟ್​​​ ಬಗ್ಗೆ ಮಾತ್ರ ಪ್ರತಿಕ್ರಿಯೆ ಕೊಡಲೇಬೇಕು ಅನಿಸ್ತು. ಬಿಎಸ್​​ವೈ ಕೊಟ್ಟ ಹೇಳಿಕೆ ತುಂಬಾ ಪ್ರಬುದ್ದತೆಯದ್ದು ಎಂದರು.

ಇದನ್ನೂ ಓದಿ: ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯುವಂತೆ ಅಗ್ರಹಿಸಿ ಪ್ರತಿಭಟನೆ

ಸಿಎಂ ಬದಲಾವಣೆ ಬಗ್ಗೆ ಮಠಾಧೀಶರು ತಮಗೆ ಅನಿಸಿದ್ದನ್ನು ಹೇಳಿದ್ದಾರೆ. ಎಲ್ಲರಿಗೂ ಅಭಿಪ್ರಾಯ ಹೇಳುವ ಅಧಿಕಾರ ಇದೆ. ಇದರ ಬಗ್ಗೆ ದೊಡ್ಡ ರಾಜಕಾರಣಿ ನಾನಲ್ಲ, ಅಷ್ಟು ಅನುಭವವೂ ಇಲ್ಲ ಎಂದು ತಿಳಿಸಿದರು.

The post ‘ಅದು ಮಾತ್ರ ತುಂಬಾ ಪ್ರಬುದ್ಧ ಹೇಳಿಕೆ’ ಸುಮಲತಾ ಅಂಬರೀಶ್​​ ಹೀಗಂದಿದ್ದು ಯಾರಿಗೆ? appeared first on News First Kannada.

Source: newsfirstlive.com

Source link