ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಂಗಾಮಿ ನಾಯಕ ಕೆ.ಎಲ್ ರಾಹುಲ್, ಆರಂಭಿಕರಾಗಿ ಕಣಕ್ಕಿಳಿಯುವುದನ್ನ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಾಹುಲ್, ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ನಾನು ಟಾಪ್ ಆರ್ಡರ್ನಲ್ಲಿ ಬ್ಯಾಟ್ ಬೀಸಲಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಆಲ್ರೌಂಡರ್ ಬಗ್ಗೆ ಮಾತನಾಡಿದ್ದು, ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಅಗತ್ಯ ಇದೆ. ಹಾಗಾಗಿ ಪ್ರತಿಭಾನ್ವಿತ ಆಟಗಾರ ವೆಂಕಟೇಶ್ ಅಯ್ಯರ್ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇದೊಂದು ಉತ್ತಮ ಅವಕಾಶ ಎಂದು ಹೇಳಿದ್ದಾರೆ. ಆ ಮೂಲಕ ಪದಾರ್ಪಣೆ ಮಾಡುವ ಸುಳಿವು ನೀಡಿದ್ದಾರೆ.
ಪಂದ್ಯಕ್ಕಾಗಿ ಹೆಚ್ಚು ಪ್ಲಾನ್ಗಳನ್ನ ಹಾಕಿಕೊಂಡಿಲ್ಲ. ಸಮಯಕ್ಕೆ ತಕ್ಕಂತೆ ಆಡಲು ಎದುರು ನೋಡುತ್ತಿದ್ದೇನೆ. ಈ ಹಿಂದೆ ಬ್ಯಾಟ್ ಬೀಸಿದಂತೆಯೇ ಈಗಲೂ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಟೆಸ್ಟ್ ಸರಣಿ ಸೋತಿದ್ದು, ನಿಜಕ್ಕೂ ಬೇಸರದ ಸಂಗತಿ. ಹೀಗಾಗಿ ಏಕದಿನ ಸರಣಿ ಗೆಲ್ಲುವ ಪಣ ತೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಕೊಹ್ಲಿಯಿಂದ ಸಾಕಷ್ಟು ಕಲಿತಿದ್ದೇವೆ. ಅವರ ಮಾರ್ಗದರ್ಶನವನ್ನೇ ಅನುಕರಣೆ ಮಾಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.