ಬೆಂಗಳೂರು: ಏಕ್ ಲವ್ ಯಾ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರದ ಎದುರು ಶಾಂಪೇನ್ ಓಪನ್ ಮಾಡಿದ ಘಟನೆ ಕುರಿತಂತೆ ನಿರ್ದೇಶಕ ಪ್ರೇಮ್, ಅಪ್ಪು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಪ್ರೇಮ್, ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ಶ್ರದ್ಧಾಂಗಲಿ ಸಲ್ಲಿಕೆ ಮಾಡಲು ಹಾಡನನ್ನು ಪ್ಲೇ ಮಾಡಿದ್ದೆವು. ಹಾಡು ಪ್ಲೇ ಆದ ಬಳಿಕ ಸಿಸ್ಟಮ್ ಕನೆಕ್ಟ್ ಆಗಿದ್ದ ಕಾರಣ ಪ್ಲೇ ಆದ ಕೂಡಲೇ ಅಪ್ಪು ಸರ್ ಫೋಟೋ ಬಂದಿದೆ. ಆದರೆ ಇದನ್ನು ಯಾಕ್ ಮಾಡ್ತಾರೆ ಗೊತ್ತಿಲ್ಲ. ಅಚಾತುರ್ಯದಿಂದ ನಿನ್ನೆ ಘಟನೆ ನಡೆದಿದೆ. ಆದರೆ ಅಚಾತುರ್ಯ ಅಂತ ಸುಮ್ಮನೆ ಇರೋದಕ್ಕೆ ಆಗೋದಿಲ್ಲ. ಅಪ್ಪು ಅವರು ನಮಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಕೆಲಸ ಮಾಡಿ, ಕೆಲಸವೇ ನಿಮ್ಮ ಬಗ್ಗೆ ಮಾತನಾಡಬೇಕು ಎಂದು ಹೇಳುತ್ತಿದ್ದರು. ಅದ್ದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಇದು ಗೊತ್ತಿಲ್ಲದೇ ಆಗಿರೋ ತಪ್ಪಾಗಿದೆ. ಆದ್ದರಿಂದ ದಯಮಾಡಿ ಕ್ಷಮಿಸಿ ಎಂದು ಕೇಳುತ್ತಿದ್ದೇನೆ ಎಂದರು.
ಬೆಳಗ್ಗೆ ರಕ್ಷಿತಾ ಮೇಡಂ ಅವರು ಕೂಡ ಬೇಜಾರಾಗಿ.. ನನಗೆ ಬೈದರು.. ಏಕೆಂದರೆ ಅಪ್ಪು ಅವರಿಗೆ ಅಷ್ಟು ಚೆನ್ನಾಗಿ ಶ್ರದ್ಧಾಂಜಲಿ ಸಲ್ಲಿಸಿಕೆ ಮಾಡಿದ್ದೆವು. ಇದರ ಮಧ್ಯೆ ಯಾರು ಪ್ಲೇ ಮಾಡಿದರೂ ಅಂತ ಬೇಜಾರು ಮಾಡಿಕೊಂಡರು. ಯಾರು ಮಾಡಿದರು ಅವರು ಚೆನ್ನಾಗಿರಲಿ. ನಾವು ಜೀವನದಲ್ಲಿ ಕಲಿತಿರೋದು ಇಷ್ಟೇ… ನಾವು ಎಷ್ಟೇ ಏನೇ ಮಾಡಿದ್ರು ಒಳ್ಳೆದನ್ನೇ ಜನರಿಗೆ ಉಳಿಸಿ ಹೋಗೋಣ ಅಂತ. ಗೊತ್ತಿಲ್ಲದೇ ಆಗಿರೋ ತಪ್ಪು, ಆದ್ದರಿಂದ ಕ್ಷಮೆ ಕೇಳುತ್ತಿದ್ದೇನೆ. ಯಾರಿಗೂ ತೊಂದರೆ ಮಾಡದೆ ಹೋಗೋಣ.. ಪುನೀತ್ ಅವರಂತೆ ಸಮಾಜಕ್ಕೆ ಒಳ್ಳೆದನ್ನು ಮಾಡಿ ಹೋಗೋಣ ಎಂದರು.