ಸದ್ಯ ಸಿನಿ ಜಗತ್ತಿನಲ್ಲಿ ಒಂದೇ ಸುದ್ದಿ, ಅದೇನಂದ್ರೆ ಬಾಲಿವುಡ್ನ ಲವ್ ಬರ್ಡ್ಸ್ಗಳಾದ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಮದುವೆ. ಯೆಸ್, ಇದೇ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ. ಬಿಟೌನ್ ಅಭಿಮಾನಿಗಳಲ್ಲಿ ಕೌತುಕ ಸೃಷ್ಟಿಸುತ್ತಿದೆ. ಇದೀಗ ಹೊರಬಂದಿರೋ ಸುದ್ದಿ ಅದೆಲ್ಲದ್ದಕ್ಕಿಂತ ವಿಭಿನ್ನವಾಗಿದೆ. ಹಾಗಾದ್ರೆ, ವಿಕ್ಕಿ-ಕತ್ರಿನಾ ಮದುವೆ ವಿಶೇಷ ಏನು ?
ಕಳೆದ ಮೂರ್ನಾಲ್ಕು ವರ್ಷಗಳ ಕಾಲ ಬಿಟೌನ್ನಲ್ಲಿ ಕೈ ಕೈ ಹಿಡಿದು ಸುತ್ತಾಡಿದ ಜೋಡಿ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಜೋಡಿ. ಕಳೆದ ಒಂದು ವರ್ಷದದಿಂದ ಈ ಜೋಡಿಯ ಮದುವೆಯ ಸುದ್ದಿ ಹರಿದಾಡುತ್ತಲೇ ಇತ್ತು. ಇಬ್ಬರು ಸ್ಟಾರ್ಗಳು ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ರೆ ಹೊರತು ಮದುವೆಯ ಬಗ್ಗೆ ಫುಲ್ ಗಪ್ ಚೂಪ್ ಆಗಿಯೇ ಇದ್ರು. ಆದ್ರೆ, ಇದೀಗ ಇವರ ಮದುವೆ ಪಕ್ಕಾ ಆಗಿದೆ. ಅದು ರಾಜಸ್ಥಾನದ ಹೋಟೆಲ್ವೊಂದರಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇಷ್ಟು ವಿಷಯ ಹೊರ ಬಿದ್ದಿರೋದೇ ತಡ, ಮದುವೆ ಹೇಗೆ ನಡೆಯುತ್ತೆ? ಯಾಱರು ಅತಿಥಿಗಳು ಪಾಲ್ಗೊಳ್ಳುತ್ತಾಳೆ? ಬಾಲಿವುಡ್ನಲ್ಲಿ ಯಾರಿಗೆ ಆಹ್ವಾನ ಹೋಗಿದೆ?….ಇಂತಹ ಪ್ರಶ್ನೆಗಳದ್ದೇ ಚರ್ಚೆ ಜೋರಾಗಿ ನಡೆಯುತ್ತಿತ್ತು. ಇದೀಗ ಮತ್ತೊಂದು ಸುದ್ದಿ ಹೊರ ಬಂದಿದೆ.
ಪುರಾಣ ಕಥೆಗಳಲ್ಲಿ ದೇವಾನು ದೇವತೆಗಳು ಕುದುರೆ ರಥ ಬಳಸುತ್ತಿದ್ರು ಅನ್ನೋದನ್ನು ಓದಿದ್ದೇವೆ. ಅನಂತರ ರಾಜಮಹಾರಾಜರ ಕಾಲದಲ್ಲಿಯೂ ಕುದುರೆ ರಥದ ಬಳಕೆ ಇತ್ತು. ಆದ್ರೆ, ನಂತರದಲ್ಲಿ ವಾಹನಗಳ ಸಂಶೋಧನೆಯಾದ ಬಳಿಕ ಕುದುರೆ ವಾಹನ ಸವಾರಿ ತೆರೆಮರೆಗೆ ಸರಿಯುತ್ತಾ ಹೋಗಿತು. ಈಗಲೂ ಕೆಲವು ಪ್ರದೇಶದಲ್ಲಿ ಕುದುರೆ ವಾಹನ ಸವಾರಿ ಇದೆ. ಆದ್ರೆ, ಅದು ತೀರಾ ಕಡಿಮೆಯ ಸಂಖ್ಯೆಯಲ್ಲಿದೆ. ಇಂದಿನ ದಿನಮಾನದಲ್ಲಿ ಕುದುರೆ ದೊಡ್ಡ ಸದ್ದು ಮಾಡುತ್ತಿರೋದು ರೇಸ್ನಲ್ಲಿ ಮಾತ್ರ.ವಿಕ್ಕಿ, ಕತ್ರಿನಾ ಮದುವೆಗೂ ಕುದುರೆಗೂ ಏನು ಸಂಬಂಧ ಅಂದುಕೊಂಡ್ರಾ? ಇಲ್ಲೇ ಇದೆ ನೋಡಿ ವಿಷಯ.7
ಕುದುರೆ ಮೇಲೆ ಗ್ರಾಂಡ್ ಎಂಟ್ರಿ ಕೊಡ್ತಾರೆ ವಿಕ್ಕಿ
ಮದುವೆ ಮಂಟಪದವರೆಗೂ ಕುದುರೆ ಸವಾರಿ
ಯೆಸ್, ಇದೆ ನೋಡಿ ವಿಕ್ಕಿ, ಕತ್ರಿನಾ ಮದುವೆ ಸಂಬಂಧಿಸಿದ ಹೊಸ ವಿಷಯ. ಇದೇ ವಾರ ರಾಜಸ್ಥಾನದ ಖಾಸಗಿ ಹೋಟೆಲ್ವೊಂದರಲ್ಲಿ ಈ ಜೋಡಿಗೆ ವಿವಾಹ ನೆರವೇರಲಿದೆ. ಅದು ಯಾವ ರೀತಿ ನಡೆಯುತ್ತೆ ಅನ್ನೋದು ಅಭಿಮಾನಿಗಳ ಕುತೂಹಲವಾಗಿತ್ತು. ಅದಕ್ಕೆ ಸಂಬಂಧಿಸಿದ ವಿಷಯಗಳು ದಿನಕ್ಕೊಂದು ಹೊರ ಬರ್ತಾನೆ ಇವೆ. ಅದರಲ್ಲಿ ವಿಕ್ಕಿ ಏಳು ಕುದುರೆ ಸವಾರಿ ಮಾಡುತ್ತಾ ಕಲ್ಯಾಣ ಮಂಟಪಕ್ಕೆ ಗ್ರಾಂಡ್ ಎಂಟ್ರಿ ಕೊಡ್ತಾರೆ ಅನ್ನೋದು ತುಂಬಾ ಇಂಟರೆಸ್ಟಿಂಗ್ ಆಗಿದೆ. ವಾವ್! ಸೂರ್ಯದೇವ ಏಳು ಕುದುರೆಯ ರಥವನ್ನು ಸವಾರಿ ಮಾಡೋದನ್ನು ಸಿನಿಮಾದಲ್ಲಿ ನೋಡಿರುತ್ತೀರಿ, ಕಥೆ ಕಾದಂಬರಿಗಳಲ್ಲಿ, ಪುರಾಣ ಕಥೆಗಳಲ್ಲಿ ಓದಿರುತ್ತೀರಿ. ಆದ್ರೆ, ಇದೀಗ ವಿಕ್ಕಿ ಸೂರ್ಯ ದೇವನ ರೀತಿ ಕಲ್ಯಾಣ ಮಟ್ಟಪಕ್ಕೆ ಗ್ರಾಂಡ್ ಎಂಟ್ರಿ ಕೊಡೊದು ಪಕ್ಕಾ ಆಗಿದೆ. ನಿಜಕ್ಕೂ ಅದು ವಿಶೇಷ ಅನಿಸುತ್ತೆ ಅಲ್ವಾ? ಹಾಗಾದ್ರೆ, ವಿಕ್ಕಿ ಕುದುರೆ ಸವಾರಿಯಲ್ಲಿ ಮದುವೆ ಮಂಟಪಕ್ಕೆ ಹೋಗುವುದು ಏಕೆ? ಅದರಲ್ಲಿಯೂ ಏಳು ಕುದರೆಗಳನ್ನು ಸವಾರಿ ಮಾಡುವುದು ಏಕೆ ಗೊತ್ತಾ?
ಏಳು ಕುದುರೆಯಿಂದ ಸಿಗುತ್ತೆ ಶುಭ ಸೂಚನೆ
ಈಗಲೂ ಇದೆ ಮದುಮಗನಿಂದ ಕುದುರೆ ಸವಾರಿ
ಹೌದು, ಹಿಂದೂ ಪುರಾಣಗಳ ಪ್ರಕಾರ ಕುದುರೆ ಶುಭ ಸೂಚನೆ. ಹೀಗಾಗಿಯೇ ಏಳು ಕುದುರೆಗಳಿರೋ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ವಾಸ್ತುಪ್ರಕಾರ ಸರಿಯಾದ ದಿಕ್ಕಿನಲ್ಲಿ ಮನೆಯ ಗೋಡೆಯ ಮೇಲೆ ಫೋಟೋ ಅಳವಡಿಸಿದ್ರೆ, ಶುಭಫಲ ದೊರೆಯುತ್ತೆ, ಮನೆಯಲ್ಲಿ ಗುಣಾತ್ಮಕ ವಾತಾವರಣ ನಿರ್ಮಾಣವಾಗುತ್ತೆ, ಮಾನಸಿಕ ನೆಮ್ಮದಿ ದೊರೆಯುತ್ತೆ. ವ್ಯಾಪಾರದಲ್ಲಿ ಆಗುತ್ತಿರೋ ನಷ್ಟ ನಿಲ್ಲುತ್ತೆ.ಹೀಗೆ ಹಲವಾರು ನಂಬಿಕೆಗಳು ಜನರಲ್ಲಿ ಇವೆ.
ಕುದುರೆ ಶುಭ ಸೂಚನೆಯ ಸಂಕೇತ ಅನ್ನೋದು ಅನಾದಿ ಕಾಲದಿಂದಲೂ ಇದೆ. ಇದೇ ಉದ್ದೇಶಕ್ಕೆ ಈಗಲೂ ಭಾರತದ ಕೆಲವು ಪ್ರದೇಶಗಳಲ್ಲಿ ಮದುಮಗ ಕುದುರೆ ಸವಾರಿ ಮಾಡುವ ಸಂಪ್ರದಾಯವಿದೆ. ಕೆಲವು ಕಡೆ ಜೋಡಿಯನ್ನು ಕುದುರೆ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುತ್ತಾರೆ. ಹೀಗಾಗಿ ಬಾಲಿವುಡ್ನಲ್ಲಿ ಜನಪ್ರಿಯ ನಟನಾಗಿರೋ ವಿಕ್ಕಿ ಅದೃಷ್ಟಕ್ಕಾಗಿ, ಶುಭಸೂಚನೆಗಾಗಿ ಏಳು ಕುದುರೆಯ ರಥವನ್ನು ಓಡಿಸಲು ಸಜ್ಜಾಗಿದ್ದಾರೆ.ಈ ಗ್ಲಾಸಿನ ಮನೆ ನೋಡ್ತಾ ಇದ್ರೆ, ನೋಡ್ತಾನೇ ಇರಬೇಕು ಅನಿಸುತ್ತೆ ಅಲ್ವಾ? ಎಂಥವರ ಮನಸ್ಸನಾದ್ರೂ ಒಂದು ಕ್ಷಣ ಸೆಳೆದು ಬಿಡುತ್ತೆ….ಅಷ್ಟೊಂದು ಸುಂದರವಾಗಿದೆ ಈ ಮನೆ. ವಿಕ್ಕಿ, ಕತ್ರಿನಾ ಕೈಫ್ ಮದುವೆಗೂ ಇದಕ್ಕೂ ಏನು ಸಂಬಂಧ ಅಂದ್ರಾ?
ಗಾಜಿನ ಮಂಟಪದಲ್ಲಿ ನಡೆಯುತ್ತೆ ಮದುವೆ
ಹೋಟೆಲ್ನಲ್ಲಿ ಜಗಮಗಿಸುವ ಗಾಜಿನ ಮಂಟಪ ನಿರ್ಮಾಣ
ಇದುವರೆಗೂ ಖಚಿತವಾಗಿ ಮದುವೆ ಹೀಗೆ ನಡೆಯುತ್ತೆ ಅನ್ನೋದರ ಬಗ್ಗೆ ಯಾವ ಸುಳಿವು ಔಟ್ ಆಗಿಲ್ಲ. ಮೂಲಗಳ ಪ್ರಕಾರ ಗಾಜಿನ ಮಂಟಪದಲ್ಲಿ ವಿವಾಹ ನೆರವೇರಲಿದೆ ಅಂತೆ. ಈಗಾಗಲೇ ಗಾಜಿನ ಮಂಟಪವನ್ನು ಜಗಮಗಿಸುವ ರೀತಿ ನಿರ್ಮಾಣ ಮಾಡಲಾಗಿದೆ.
ಮದುವೆಯಲ್ಲಿ ಇರ್ತಾರೆ 100 ಬೌನ್ಸರ್
ಮೊಬೈಲ್ ಒಯ್ಯುವಂತಿಲ್ಲ, ಡ್ರೋನ್ ಬಳಸುವಂತಿಲ್ಲ
ವಿವಿಐಪಿಗಳ ಮದುವೆಯಲ್ಲಿ ಭದ್ರತೆಗಾಗಿ ಬೌನ್ಸರ್ಗಳ ನೇಮಕ ಮಾಡಿಕೊಳ್ಳೋದು ಕಾಮನ್. ಬರುವಂತಹ ಅತಿಥಿಗಳಿಗೇ ಭದ್ರತೆಯನ್ನು ಇವರು ನೀಡುತ್ತಾರೆ. ಹೇಳಿಕೇಳಿ ವಿಕ್ಕಿ, ಕತ್ರಿನಾ ಬಾಲಿವುಡ್ನ ಸ್ಟಾರ್ ನಟ, ನಟಿಯರು. ಹೀಗಿರುವಾಗ ಬೌನ್ಸರ್ಗಳು ಬೇಕೇಬೇಕು. ಆದ್ರೆ, 100 ಬೌನ್ಸರ್ಗಳ ನೇಮಕ ಅಗತ್ಯ ಇತ್ತಾ? ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಯಾಕಂದ್ರೆ, ಮದುವೆಗೆ ಸಾಮಾನ್ಯ ಜನರು ಇರಲಿ, ಚಿಕ್ಕಪುಟ್ಟ ಸ್ಟಾರ್ಗಳಿಗೂ ನೋ ಎಂಟ್ರಿ. ಅದೇನಿದ್ರೂ ಬಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ ನಟ, ನಟಿಯರು, ಎರಡು ಕಡೆಯ ಕುಟುಂಬದವರಿಗೆ ಮಾತ್ರ ಪ್ರವೇಶ. ಹೀಗಿರುವ 100 ಬೌನ್ಸರ್ ನೇಮಕ ಮಾಡಿಕೊಂಡಿದ್ದು ಯಾಕೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ.
ಮತ್ತೊಂದು ವಿಶೇಷ ಅಂದ್ರೆ, ಮದುವೆಗೆ ಬರೋ ಅತಿಥಿಗಳು ಮೊಬೈಲ್ ಒಯ್ಯುವಂತಿಲ್ಲ. ಫೋಟೋ ಕ್ಲಿಕ್ಕಿಸುವಂತಿಲ್ಲ. ಮದುವೆ ಸಂದರ್ಭದಲ್ಲಿ ಡ್ರೋನ್ಗಳ ಹಾರಾಟವನ್ನು ನಿಷೇಧಿಸಲಾಗಿದೆ. ಒಮ್ಮೆ ಡ್ರೋನ್ ಹಾರಿಸಿ ಫೋಟೋ ತೆಗೆದುಕೊಂಡ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ರವಾನಿಸಲಾಗಿದೆ. ಯೆಸ್, ವಿಕ್ಕಿ ಮತ್ತು ಕತ್ರಿನಾ ವಿವಾಹ ಫುಲ್ ಸೀಕ್ರೆಟ್ ಆಗಿಯೇ ನಡೆಯುತ್ತಿದೆ.
ಬಾಲಿವುಡ್ನಲ್ಲಿ ಅಂತರ್ ಧರ್ಮೀಯರ ವಿವಾಹ ಇದೆ ಮೊದಲನೆಯದಲ್ಲ. ಅಲ್ಲಿ ಅಂತರ್ ಧರ್ಮೀಯ ವಿವಾಹ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಈ ಹಿಂದೆ ಧರ್ಮೇಂದ್ರ-ಹೇಮಾಮಾಲಿನಿ, ಶಾರುಖ್ ಖಾನ್- ಗೌರಿ ಖಾನ್, ಹೃತಿಕ್ ರೋಷನ್- ಸುಸೇನ್ ರೋಷನ್, ಸೈಫ್ ಅಲಿ ಖಾನ್-ಕರಿನಾ ಕಪೂರ್..ಹೀಗೆ ಸಾಲು ಸಾಲು ಅಂತರ್ ಧರ್ಮೀಯ ಜೋಡಿಗಳು ಸಿಗುತ್ತವೆ. ಇದಕ್ಕೆ ಹೊಸ ಸೇರ್ಪಡೆ ವಿಕ್ಕಿ-ಕತ್ರಿನಾ ಜೋಡಿ.
The post ಅದ್ದೂರಿ ಕಲ್ಯಾಣದಲ್ಲಿ ಮದುವೆ ಮಂಟಪಕ್ಕೆ ವಿಕ್ಕಿ ಸ್ಪೇಷಲ್ ಎಂಟ್ರಿ ಹೇಗಿರುತ್ತೆ ಗೊತ್ತಾ? appeared first on News First Kannada.