ಹುಬ್ಬಳ್ಳಿ: ಅದ್ದೂರಿ ಮದ್ವೆ ಆಗುವ ಆಸೆಯಿಂದ ಸಿನಿಮಾ ಸ್ಟೈಲ್ನಲ್ಲಿ ಬ್ಯಾಂಕ್ ದರೋಡೆಗಿಳಿದಿದ್ದ ಖತರ್ನಾಕ್ ಆರೋಪಿ ಅಂದರ್ ಆಗಿದ್ದಾನೆ.
ನಾಲ್ಕು ಜನ ಮಾತನಾಡಿಕೊಳ್ಳವ ಹಾಗೇ ಅದ್ದೂರಿ ಮದ್ವೆ ಮಾಡಿಕೊಳ್ಳಬೇಕು ಎಂದು ಹಸಮಣೆ ಏರಬೇಕಿದ್ದವ ಸದ್ಯ ಪೊಲೀಸರ ಅತಿಥಿಯಾದ ಘಟನೆ ನಗರದಲ್ಲಿ ನಡೆದಿದೆ. ವಿಜಯಪುರ ಮೂಲದ ಪ್ರವೀಣ್ ಎಂಬಾತ ಅದ್ದೂರಿ ಮದ್ವೆ ಆಗುವ ಕನಸು ಕಂಡಿದ್ದ. ಆದರೆ ಆಸೆಯನ್ನು ಈಡೇರಿಸಿಕೊಳ್ಳಲು ಮಾತ್ರ ಆತ ತಪ್ಪು ದಾರಿ ಹಿಡಿದಿದ್ದ. ಮದ್ವೆಗೆ ಸಾಕಷ್ಟು ಹಣ ಬೇಕಾಗುತ್ತೆ ಎಂದು ಯೋಚಿಸಿದವ ಸೀದಾ ಸಿನಿಮಾ ಸ್ಟೈಲ್ನಲ್ಲಿ ಬ್ಯಾಂಕ್ ದರೋಡೆಗಿಳಿದಿದ್ದ ಎನ್ನಲಾಗಿದೆ.
ಜನವರಿ 18 ರಂದು ಕೈಯಲ್ಲಿ ಚಾಕು ಹಿಡಿದು, ಮಂಕಿ ಕ್ಯಾಪ್ ಧರಿಸಿ ಕೊಪ್ಪಿಕರ್ ರಸ್ತೆಯ ಎಸ್ಬಿಐ ಬ್ಯಾಂಕ್ ಕ್ಯಾಶಿಯರ್ ಛೇಂಬರ್ಗೆ ನುಗ್ಗಿದ್ದ, ಈ ಆಸಾಮಿ ಮಹಿಳಾ ಸಿಬ್ಬಂದಿಗೆ ಚಾಕು ತೋರಿಸಿ ಆವಾಜ್ ಹಾಕಿದ್ದ. ಬಳಿಕ ಕೌಂಟರ್ನಲ್ಲಿದ್ದ 6.39 ಲಕ್ಷ ರೂಪಾಯಿಯನ್ನು ಎಗರಸಿ ಬೈಬೈ ಹೇಳಿದ್ದ. ಆಗುಂತಕನ ಸಂಪೂರ್ಣ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಆರೋಪಿ ಇನ್ನೇನು ಎಸ್ಕೇಪ್ ಆಗುತ್ತಿದ್ದಾಗ ಚೇಸ್ ಮಾಡಿ ಕಳ್ಳನ ಹೆಡೆಮುರಿ ಕಟ್ಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.