ಅದ್ದೂರಿ ವೇದಿಕೆಯಲ್ಲೇ ರಿಲೀಸ್​ ಆಯ್ತು ಇಶಾನ್​ ‘ರೆಮೊ’ ಸಿನಿಮಾ ಟೀಸರ್​; ಹೇಗಿದೆ ಗೊತ್ತಾ?


ನಟ ಸಾರ್ವಭೌಮ ಚಿತ್ರದ ನಂತರ ನಿರ್ದೇಶಕ ಪವನ್​ ಒಡೆಯರ್​ ‘ರೆಮೋ’ ಚಿತ್ರದಲ್ಲಿ ತಲೀನರಾಗಿದ್ದಾರೆ..ನವ ನಟ ಇಶಾನ್​ನ ರ್ಯಾಪ್​ ಸಿಂಗರ್​ ಆಗಿ ತೋರಿಸೊಕೆ ಸಜ್ಜಾಗಿರುವ ಪವನ್​, ಸದ್ದಿಲ್ಲದೆ ಚಿತ್ರದ ಶೂಟಿಂಗ್​ ಮುಗಿಸಿ ಪ್ರಚಾರದ ಕಡೆ ಮುಖ ಮಾಡಿದ್ದಾರೆ..ಚಿತ್ರದಲ್ಲಿ ಆಶಿಕಾ ನಾಯಕಿ ಯಾಗಿ ಕಾಣಿಸಿದ್ದು ಚಿತ್ರದ ಟೀಸರ್​ ಲಾಂಚ್​ ಆಗಿದೆ.. ಅದ್ದೂರಿ ಕಾರ್ಯಕ್ರಮದ ಮೂಲಕ ಚಿತ್ರತಂಡ ಚಿತ್ರದ ಟೀಸರ್​ ಲಾಂಚ್​ ಮಾಡಿದ್ದು, ರೆಮೋ ಟಿಸರ್​ಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ.

ನಿರ್ಮಾಪಕ ಸಿ.ಆರ್.ಮನೋಹರ್ ‘ದಿ ವಿಲನ್​ ’ ಚಿತ್ರದ ನಂತರ ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ಜೋಡಿಯ “ರೇಮೊ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..ದಿ ವಿಲನ್​ ಅಂತ ಮಲ್ಟಿ ಸ್ಟಾರ್​ ಸಿನಿಮಾ ಮಾಡಿದ್ದ ಸಿಅರ್​ ಮನೋಹರ್​ ಅಷ್ಟೇ ಗ್ರಾಂಡ್​ ಆಗಿ ‘ರೆಮೊ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ..

ಕ್ವಾಲಿಟಿ ವಿಚಾರದಲ್ಲಿ ಎಂದಿಗೂ ಕಾಂಪ್ರೂ ಆಗದ ಸಿ.ಆರ್​ ಮನೋಹರ್​, ರೆಮೋ ಚಿತ್ರದಲ್ಲೂ ಅದೇ ಪಾಲಿಸಿ ಮುಂದುವರೆಸಿದ್ದಾರೆ.. ಅದಕ್ಕೆ ಸಾಕ್ಷಿ ಎಂಬಂತೆ ರೆಮೋ ಚಿತ್ರದಲ್ಲಿ ನವ ನಟ ಇಶಾನ್​ ನಟಿಸಿದ್ರು ಬಹಳ ಅದ್ದೂರಿಯಾಗಿ ಚಿತ್ರದ ಟೀಸರ್​ ಲಾಂಚ್​ ಮಾಡಿದ್ದಾರೆ..ಇನ್ನು ಟೀಸರ್​ ಲಾಂಚ್​ ಕಾರ್ಯಕ್ರಮಕ್ಕೆ ವಾಣಿಜ್ಯ ಮಂಡಳಿ ಪದಧಾಧಿಕಾರಿಗಳು, ನಿರ್ಮಾಪಕ ಉಮಾಪತಿ, ನಿರ್ದೇಶಕ ಯೋಗರಾಜ್​ ಭಟ್​ ,ಎ.ಹರ್ಷ ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.

ರೆಮೋ ಚಿತ್ರದ ನಾಯಕ ನಿರ್ಮಾಪಕ ಮನೋಹರ್ ಚಿಕ್ಕಪ್ಪನ ಮಗನಾಗಿದ್ದು, ತಮ್ಮನಿಗಾಗಿ ರೆಮೋ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಮನೋಹರ್​.. ಈ ಹಿಂದೆ ಇಶಾನ್ “ರೋಗ್” ಚಿತ್ರದಲ್ಲಿ ನಾಯಕನಾಗಿ ಕಾಣಿಸಿದ್ರು..ವಿಶೇಷ ಅಂದ್ರೆ ರೋಗ್​ ಚಿತ್ರಕ್ಕೂ ಮನೋಹರ್​ ಬಂಡವಾಳ ಹೂಡಿದ್ರು.. ಈಗ ಇಶಾನ್​ 2ನೇ ಚಿತ್ರಕ್ಕೂ ಸಿ.ಆರ್​ ಮನೋಹರ್ ಹಣ ಹೂಡಿದ್ದು, ಪವನ್​ ಒಡೆಯರ್​ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳಿದ್ದಾರೆ.

ರೆಮೋ ಚಿತ್ರದ ಮ್ಯೂಸಿಕಲ್​ ಸಿನಿಮಾವಾಗಿದ್ದು, ಚಿತ್ರದಲ್ಲಿ ನಾಯಕ ರ್ಯಾಪ್​ ಸಿಂಗರ್​ ಪಾತ್ರದಲ್ಲಿ ಕಾಣಿಸಿದ್ದಾನೆ.. ಇನ್ನು ಚಿತ್ರದ ಮೂಲಕ ಪವನ್ ವಿಸೇಷವಾದ ಕತೆ ಹೇಳಲು ಹೊರಟಿದ್ದಾರೆ ಅನ್ನೋದು ಚಿತ್ರದ ಟೀಸರ್​ನಲ್ಲಿ ರಿವೀಲ್​ ಆಗಿದ್ದು, ರೆಮೋ ಚಿತ್ರದ ಟೀಸರ್​ಗೆ ಸಖತ್​ ರೆಸ್ಪಾನ್ಸ್​ ಸಿಕ್ಕಿದೆ.. ಅಲ್ಲದೆ ನಾಯಕ ಇಶಾನ್​ ಅಭಿನಯಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರ್ತಿವೆ..

ರೆಮೋ ಚಿತ್ರಕ್ಕೆ ಮ್ಯಾಜಿಕಲ್​ ಕಂಪೋಸರ್​ ಅರ್ಜುನ್ ಜನ್ಯ ಅವರ ಸಂಗೀತ ನೀಡಿದ್ದು, ಟೀಸರ್​ನಲ್ಲೇ ಅರ್ಜುನ್​ ಟ್ಯೂನ್​ಗಳು ಮೋಡಿ ಮಾಡಿವೆ.. ಈಗಾಗಲೇ ಚಿತ್ರದ ಶೂಟಿಂಗ್​ ಮುಗಿಸಿರುವ ನಿರ್ದೇಶಕ ಪವನ್​ ಒಡೆಯರ್​ ಸದ್ಯ ಪೋಸ್ಟ್​ ಪ್ರೋಡಕ್ಷನ್​ ವರ್ಕ್​ನಲ್ಲಿ ಬ್ಯುಸಿಯಾಗಿದ್ದಾರೆ..ಇನ್ನ ಚಿತ್ರ ತಂಡ ಅಂದು ಕೊಂಡಂತೆ ಆದ್ರೆ ಮುದಿನ ವರ್ಷ ಫೆಬ್ರವರಿಯಲ್ಲಿ ರೆಮೋ ಚಿತ್ರ ರಿಲೀಸ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

News First Live Kannada


Leave a Reply

Your email address will not be published. Required fields are marked *