‘ಅಧಿಕಾರದಲ್ಲಿದ್ದಾಗ ಎಲ್ರೂ ನಮಸ್ಕಾರ ಮಾಡ್ತಾರೆ, ಇಲ್ಲದಿದ್ದಾಗ ಎದುರಿಗೆ ಸಿಕ್ಕರೂ ಮಾತಾಡಲ್ಲ’


ಬೆಂಗಳೂರು: ನಗರದ ರಿಚ್​​ಮಂಡ್ ಸರ್ಕಲ್​ನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಎಸ್.ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿ ಮುತ್ತು ಭಾಗ -9 ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ.. ಇದು ಅತ್ಯಂತ ಅಭೂತಪೂರ್ವ ಸಭೆ. ಹುಟ್ಟುಹಬ್ಬ ಹೇಗೆ ಆಚರಣೆ ಮಾಡಬೇಕು ಎಂಬುದನ್ನ ಷಡಕ್ಷರಿ ಅವರಿಂದ ಕಲಿಯಬೇಕು. ಇಷ್ಟೊಂದು ಜನರನ್ನು ಸೇರಿಸಿ, ಮೊಮ್ಮಕ್ಕಳ ಹಾಗು ಇಡೀ ಸಂಸಾರದ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಸಕರಾತ್ಮಕವಾದ ಶಕ್ತಿ ಕೇಂದ್ರ ಷಡಕ್ಷರಿ ಅವರು.

ಇಂತಹ ಕ್ಷೇತ್ರದಲ್ಲಿ ಸ್ಪರ್ಶ ಇಲ್ಲ ಅಂತಿಲ್ಲ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಷಡಕ್ಷರಿ ಇದ್ದಾರೆ. ಷಡಕ್ಷರಿ, ಕನ್ನಡ ನಾಡಿನ ಶಕ್ತಿ. ನಮ್ಮ ಸಂಬಂಧಗಳು ಶಾಸ್ವತ. ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರದಲ್ಲಿ ಇದ್ದಾಗ ಎಲ್ರೂ ನಮಸ್ಕಾರ ಮಾಡ್ತಾರೆ. ಅದೇ ಅಧಿಕಾರ ಇಲ್ಲದೇ ಇದ್ದಾಗ ಎದುರು ಸಿಕ್ರೂ ಮಾತಾಡಿಸಲ್ಲ ಎಂದಿದ್ದಾರೆ.

ಕೆಲವ್ರು ಅಧಿಕಾರ ಪಿತ್ರಾರ್ಜಿತ ಆಸ್ತಿ ಅಂದ್ಕೊಂಡಿದ್ದಾರೆ
ಪ್ರಶಸ್ತಿ ಸಮಾರಂಭಕ್ಕೆ ನನಗೆ ಷಡಕ್ಷರಿಯವರು ಆಹ್ವಾನ ಕೊಟ್ಟರು. ಬಹಳ ಸಂತೋಷದಿಂದ ನಾನು ಕಾರ್ಯಕ್ರಮಕ್ಕೆ ಬರೋದಕ್ಕೆ ಒಪ್ಪಿಕೊಂಡೆ. ಅವರು ನಾನು ಮುಖ್ಯಮಂತ್ರಿ ಇದೀನಿ ಕಾರ್ಯಕ್ರಮಕ್ಕೆ ಬರ್ತೀನೋ ಇಲ್ವೋ ಅಂದ್ಕೊಂಡಿದ್ದರು. ನನ್ನ ಮತ್ತು ಷಡಕ್ಷರಿ ಅವರ ಸಂಬಂಧ ಚೆನ್ನಾಗಿದೆ. ನಮ್ಮ ಸಂಬಂಧಗಳು ಶಾಶ್ವತ, ಅಧಿಕಾರ ಶಾಶ್ವತ ಅಲ್ಲ. ಕೆಲವರು ಅಧಿಕಾರ ಪಿತ್ರಾರ್ಜಿತ ಆಸ್ತಿ ಅಂದ್ಕೊಂಡಿದ್ದಾರೆ. ಕೆಲವರು ಅಧಿಕದಲ್ಲಿದ್ದಾಗ ಎದುರಿಗೆ ಸಿಕ್ಕರೂ ನಮಸ್ಕಾರ ಮಾಡೋದಿಲ್ಲ ಎಂದು ವಾಸ್ತವನ್ನ ತೆರೆದಿಟ್ಟರು.

News First Live Kannada


Leave a Reply

Your email address will not be published. Required fields are marked *