ಮಂಡ್ಯ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ರೂ ರಾಜಾಹುಲಿ, ಇಲ್ಲದಿದ್ರೂ ರಾಜಹುಲಿನೇ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹಾಡಿ ಹೊಗಳಿದ್ದಾರೆ. ಇಂದು ಪರಿಷತ್ ಚುನಾವಣೆ ಕಾರಣ ಸಚಿವ ಎಸ್.ಟಿ. ಸೋಮಶೇಖರ್ ಮಂಡ್ಯದಲ್ಲಿ ಪಂಚಾಯತಿ ಸದಸ್ಯರ ಸಮಾವೇಶವನ್ನ ನಡೆಸಿದ್ರು.
ಈ ವೇಳೆ ಮಾತನಾಡಿದ ಸಚಿವ ಸೋಮಶೇಖರ್, ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ವಿರುದ್ಧ ಕಿಡಿ ಕಾರಿದ್ರು. ಬಳಿಕ ಮಾಜಿ ಸಿಎಂ ಬಿಎಸ್ವೈ ಬಗ್ಗೆ ಮಾತನಾಡಿದ ಸಚಿವ ಸೋಮಶೇಖರ್, ರಾಜಹುಲಿ ಯಡಿಯೂರಪ್ಪ ಎಂದೆಂದಿಗೂ ರಾಜಹುಲಿನೇ ಅಂತ ಬಿಎಸ್ವೈರನ್ನ ಹೊಗಳಿದ್ದಾರೆ.