ಮಂಡ್ಯ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ದರೂ ರಾಜಾಹುಲಿ, ಅಧಿಕಾರದಲ್ಲಿರದಿದ್ದರೂ ರಾಜಾಹುಲಿನೇ ಎಂದು ಸಚಿವ ಎಸ್ಟಿ ಸೋಮಶೇಖರ್ ಕೊಂಡಾಡಿದ್ದಾರೆ.
ಮಂಡ್ಯದಲ್ಲಿ ನಡೆದ ಗ್ರಾಮ ಪಂಚಾಯತಿ ಸದಸ್ಯರ ಸಮಾವೇಶದಲ್ಲಿ ಮಾತನಾಡಿದರು. 6 ವರ್ಷ ಅಧಿಕಾರಾವಧಿಯಲ್ಲಿ ಯಾವುದೇ ಗ್ರಾಮ ಸಭೆ ನಡೆಸಲಿಲ್ಲ. ಅನುದಾನ ಬಳಕೆಯಲ್ಲಿ ವಿಫಲರಾಗಿದ್ದಾರೆ. ಎಂದು ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ವಿರುದ್ಧ ಸೋಮಶೇಖರ್ ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿ ಕೊಡುವ ಕಾಸಿಗಾಗಿ ನಾಯಕರು ಅವನ ಹಿಂದೆ ಇದ್ದಾರೆ. ಗತಿಗೆಟ್ಟು ಕುಳಿತಿದ್ದ ಕಾಂಗ್ರೆಸ್ ಜಿಲ್ಲಾ ನಾಯಕರ ದಿನೇಶ್ ಬಳಿ ಸ್ವಲ್ಪ ಕಾಸಿದೆ ಎಂದು ಹಿಂದೆ ತಿರುಗುತ್ತಿದ್ದಾರೆ. ನಾನು ಗೆದ್ದರೆ ಸರ್ಕಾರದಿಂದ ಅನುದಾನದ ಹೊಳೆ ಹರಿಸುತ್ತೇನೆ ಎಂದು ದಿನೇಶ್ ಹೇಳ್ತಾನೆ. ಏನು ಹರಿಸುತ್ತಾನೆ ಅವನು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ಯಾ? ಎಂದು ಪ್ರಶ್ನೆ ಮಾಡಿದರು.
The post ಅಧಿಕಾರದಲ್ಲಿರಲಿ, ಇರದೇ ಇರಲಿ BSY ಯಾವತ್ತೂ ‘ರಾಜಾಹುಲಿ’ನೇ -S.T.ಸೋಮಶೇಖರ್ appeared first on News First Kannada.