ಬೆಂಗಳೂರು: ಮಹದೇವಪುರ ವಲಯ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಭಾರೀ ಪ್ರಮಾಣದ ಗಾಂಜಾ ಸೀಜ್ ಮಾಡಿದ್ದಾರೆ.

 

ಅಬಕಾರಿ ನಿರೀಕ್ಷಕ ಎ.ಎ.ಮುಜವಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು,  49,950 ಕೆ.ಜಿ. ಗಾಂಜಾ ಹಾಗೂ ಅದರ ಸಾಗಾಟಕ್ಕೆ ಬಳಸಿದ ವಾಹನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಬರೋಬ್ಬರಿ 24 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಇದಾಗಿದ್ದು, ಆಂಧ್ರಪ್ರದೇಶದ ಅನಂತಪುರ ದಿಂದ ಬೆಂಗಳೂರಿಗೆ ಸಾಗಟವಾಗುತ್ತಿತ್ತು ಎನ್ನಲಾಗಿದೆ.

ಅಧಿಕಾರಿಗಳು ಅನಂತಪುರ ಮೂಲದ ಆರೋಪಿ ವಿರೇಶ್ ಎಂಬಾತನನ್ನು ಅರೆಸ್ಟ್​ ಮಾಡಿದ್ದಾರೆ.

The post ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 49,950 ಕೆ.ಜಿ. ಗಾಂಜಾ ಜಪ್ತಿ appeared first on News First Kannada.

Source: newsfirstlive.com

Source link