ಚಿಕ್ಕಮಗಳೂರು: ಕೊರೊನಾ ನಿಯಮ ಮೀರಿ ಮದುವೆ ಮಾಡಿಕೊಳ್ಳುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ಬರುತ್ತಲೇ ವಧುವನ್ನ ಸ್ಟೇಜ್ ಮೇಲೆ ಬಿಟ್ಟು ವರ ಓಡಿಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

ಸಗುನಪ್ಪ ಕುಟುಂಬ 10 ಮಂದಿ ಸೇರುತ್ತಾರೆಂದು ಪರ್ಮಿಷನ್ ತೆಗೆದುಕೊಂಡ ಮದುವೆಯಲ್ಲಿ ಸುಮಾರು 300 ರಿಂದ 400 ಮಂದಿ ಸೇರಿದ್ದರು ಎನ್ನಲಾಗಿದೆ. ವಿಷಯ ತಿಳಿದು ಜೋಡಿಹೋಚಿಹಳ್ಳಿ ಗ್ರಾಪಂ. ಅಧಕಾರಿಗಳು ಸ್ಥಳಕ್ಕೆ ಆಗಮಿಸುತ್ತಲೇ ವರ ವಧುವನ್ನ ಬಿಟ್ಟು ಓಡಿಹೋಗಿದ್ರೆ ಇತ್ತ ಮದುವೆಗೆಂದು ಬಂದಿದ್ದ ಅತಿಥಿಗಳೂ ಸಹ ಭರ್ಜರಿ ಭೋಜನವನ್ನೂ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಅಧಿಕಾರಿಗಳ ಕಂಡು ವಧುವನ್ನು ಸ್ಟೇಜ್​ನಲ್ಲೇ ಬಿಟ್ಟು ಓಡಿದ ವರ appeared first on News First Kannada.

Source: newsfirstlive.com

Source link