ಮೈಸೂರು: ಐಎಎಸ್​​ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಧಾನ‌ ವ್ಯಕ್ತಪಡಿಸಿದ್ದಾರೆ.

ಮೈಸೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ಇಂದು ಸತ್ತೂರು ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಶ್ರೀಗಳ ಜೊತೆಗೆ ಸಿದ್ದರಾಮಯ್ಯ ಕೆಲ ಕಾಲ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು. ಈ ವೇಳೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಇಬ್ಬರು ಐಎಎಸ್‌ಗಳ ಗಲಾಟೆ ಬಗ್ಗೆ ಪ್ರಸ್ತಾಪವಾಗಿದೆ.

ಐಎಎಸ್ ಅಧಿಕಾರಿಗಳಿಗೆ ಮಾಧ್ಯಮದವರನ್ನ ಕರೆದು ಮಾತನಾಡುವ ಅಧಿಕಾರ ಇಲ್ಲ. ಇದು ಪ್ರಜಾಪ್ರಭುತ್ವ, ಇಲ್ಲಿ ಎಲ್ಲದಕ್ಕೂ ಶಿಸ್ತು ಇರುತ್ತದೆ. ಅವರೇ ಹೀಗೆ ಮಾತನಾಡಿದರೆ ಹೇಗೆ? ಐಎಎಸ್‌ ಅಧಿಕಾರಿಗಳ ಮಾತುಕೇಳಿ ಸರ್ಕಾರ ನಡೆಸಲು ಆಗುತ್ತಾ? ಮೈಸೂರಿನಲ್ಲಿ ನನ್ನ ಆಡಳಿತದ ವೇಳೆ ಹೊಸ ಡಿಸಿ ಕಚೇರಿ ಉದ್ಘಾಟಿಸಿದ್ದೇನೆ.  ಸಂಪೂರ್ಣವಾಗಿ ಹೊಸ ಕಚೇರಿಗೆ ಶಿಫ್ಟ್ ಆಗಿಲ್ಲ ಎಂದಿದ್ದಾರೆ.

ಡಿಸಿ ಮನೆ ಹತ್ತಿರ ಇದೇ ಅನ್ನೋ ಕಾರಣಕ್ಕೆ ಅವರು ಹಳೆ ಕಚೇರಿಯಲ್ಲೇ ಉಳಿದಿರಬಹುದು. ಶಾಸನ ಸಭೆಯಲ್ಲಿ ಉತ್ತರ ಕೊಡಬೇಕಾದವರು ನಾವು. ಅಧಿಕಾರಿಗಳು ಬಂದು ಅಲ್ಲಿ ಉತ್ತರ ಕೊಡಬೇಕಿಲ್ಲ. ಹಕ್ಕುಚ್ಯುತಿ ಆದಾಗ ಮಾತ್ರ ಅವರು ಉತ್ತರ ಕೊಡಲು ಸಾಧ್ಯ. ಅಧಿಕಾರಿಗಳ ಮಾತು ಕೇಳಿಕೊಂಡು ಸರ್ಕಾರ ನಡೆಸೋದು ಸಾಧ್ಯನಾ? ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

The post ಅಧಿಕಾರಿಗಳ ಕೇಳಿ ಸರ್ಕಾರ ನಡೆಸೋಕಾಗುತ್ತಾ? ಸಿಂಧೂರಿ, ಶಿಲ್ಪಾನಾಗ್ ವಿರುದ್ಧ ಸಿದ್ದರಾಮಯ್ಯ ಕಿಡಿ  appeared first on News First Kannada.

Source: newsfirstlive.com

Source link