ಬೆಂಗಳೂರು: ಮೈಸೂರಲ್ಲಿ ಐಎಎಸ್​ ಅಧಿಕಾರಿಗಳ ನಡುವಿನ ಜಟಾಪಟಿ ಮುಂದುವರಿದಿದೆ. ಈ ಬಗ್ಗೆ ಇಂದು ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್​ ಯಡಿಯೂರಪ್ಪ.. ಇಂದು ಸಂಜೆ ಕೂತು ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ನಡುವಿನ ಗೊಂದಲ ಸಂಬಂಧ ನಿನ್ನೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಸಿಎಸ್​​ ಅವರು ಇಬ್ಬರ ಅಭಿಪ್ರಾಯವನ್ನೂ ಪಡೆದು ಮಾತುಕತೆ ನಡೆಸಿದ್ದಾರೆ.

ಅಲ್ಲಿ ಏನೇನು ಆಗುತ್ತಿದೆ ಅನ್ನೋದ್ರ ಬಗ್ಗೆ ಇಂದು ಬೆಳಗ್ಗೆ ಸಿಎಸ್​ ಪಿ.ರವಿಕುಮಾರ್​ ನನಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಇಂದು ಸಂಜೆ ಇಬ್ಬರು ಕೂತು ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರೋಹಿಣಿ V/S ಶಿಲ್ಪಾ ನಾಗ್: ಸಾಂಸ್ಕೃತಿಕ ನಗರಿಯಲ್ಲಿ ಅಸಲಿಗೆ ನಡೀತಿರೋದೇನು..?​

The post ಅಧಿಕಾರಿಗಳ ಜಟಾಪಟಿ; ಸಂಜೆ ವೇಳೆಗೆ ಸರ್ಕಾರದಿಂದ ಹೊರ ಬೀಳುತ್ತಾ ಮಹತ್ವದ ನಿರ್ಧಾರ? appeared first on News First Kannada.

Source: newsfirstlive.com

Source link