ರಾಯಚೂರು: ದೇವದುರ್ಗ ತಾಲೂಕಿನ ವೀರಗೋಟ ಬಳಿಯ ಕುರುಬರದೊಡ್ಡಿಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವವರು, ಸೋಂಕಿಗೀಡಾಗಿ ವಾರ ಕಳೆದ್ರೂ ಕ್ವಾರಂಟೀನ್ ಆಗದೆ ಅಧಿಕಾರಿಗಳಿಗೆ ತಲೆನೋವು ತಂದಿದ್ದಾರೆ. ಅಧಿಕಾರಿಗಳು ಸೋಂಕಿತರನ್ನ ಕರೆಯಲು ಬಂದ್ರೆ ಮನೆ ಪಕ್ಕದ ಗುಡ್ಡ ಹತ್ತಿ ಕೂರುತ್ತಿದ್ದಾರೆ. ಈ ಮಧ್ಯೆ ಸೋಂಕಿತ ಮಹಿಳೆಯೊಬ್ಬಳು ಅಧಿಕಾರಿಗಳತ್ತ ನಾಯಿ ಛೂ ಬಿಟ್ಟ ಘಟನೆ ನಡೆದಿದೆ.

ಸೋಂಕಿತೆಯಿಂದ ಆಕೆಯ ಪತಿಗೂ ಕೊರೊನಾ ಹರಡಿದೆ. ಆಕೆಯ ಮನೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು ಕೂಡ ಇರೋದ್ರಿಂದ ಸೋಂಕಿತೆಗೆ ಕ್ವಾರಂಟೀನ್​ನಲ್ಲಿ ಇರುವಂತೆ ಅಧಿಕಾರಿಗಳು ಸೂಚನೆ ಕೊಟ್ಟಿದ್ರು. ಆದ್ರೆ ಅವರ ಮಾತಿಗೆ ಕ್ಯಾರೆ ಎನ್ನದ ಮಹಿಳೆ ಎಲ್ಲಾ ಕಡೆ ಓಡಾಟ ನಡೆಸಿದ್ದಾಳೆ. ಈ ಹಿನ್ನೆಲೆ ಆಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ರೇಷನ್ ಕಾರ್ಡ್​ ರದ್ದು
ರಾಯಚೂರು ಎ.ಸಿ ಸಂತೋಷ್ ಕಾಮಗೌಡ ಮಹಿಳೆ ವಿರುದ್ಧ ಕೇಸ್ ದಾಖಲಿಸುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸೋಂಕಿತೆ ಮೇಲೆ ಎಫ್ಐಆರ್​​ ದಾಖಲಾಗಿದೆ. ಅಷ್ಟೇ ಅಲ್ಲ ಸೋಂಕಿತ‌ ಮಹಿಳೆ ಮನೆಯ ವಿದ್ಯುತ್ ಕಟ್ ಮಾಡಿ, ಪಡಿತರ ಚೀಟಿ ರದ್ದು ಮಾಡಲಾಗಿದೆ. ಪತಿ ಪತ್ನಿ ಇಬ್ಬರೂ ಕ್ವಾರಂಟೀನ್ ಆಗುವಂತೆ ದೇವದುರ್ಗ ತಾಲೂಕಾಡಳಿತ ಸೂಚನೆ ಕೊಟ್ಟಿದೆ.

 

The post ಅಧಿಕಾರಿಗಳ ಮೇಲೆ ನಾಯಿ ಛೂ ಬಿಟ್ಟ ಸೋಂಕಿತೆಗೆ ಕೊನೆಗೆ ಏನಾಯ್ತು ಗೊತ್ತಾ appeared first on News First Kannada.

Source: newsfirstlive.com

Source link