ಉಡುಪಿ: ಲಾಕ್​ಡೌನ್ ಇದ್ರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನವನ್ನು ತಡೆಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,  ತ್ಯಾಜ್ಯ ವಿಲೇವಾರಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಆಭರಣ ಮೋಟರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ವರೆಗೆ ಹೆದ್ದಾರಿ ಬದಿಯಲ್ಲಿ ಬಿದ್ದಿದ್ದ ಕಸವನ್ನು ಅನಗತ್ಯ ಓಡಾಟ ನಡೆಸಿದವರ ವಾಹನಕ್ಕೆ ತುಂಬಿಸಿ ಡಂಪಿಂಗ್ ಯಾರ್ಡ್​​ಗೆ ಸಾಗಿಸಿದ್ದಾರೆ.

ಇದೇ ರೀತಿಯಲ್ಲಿ ನಿಯಮ ಉಲ್ಲಂಘಿಸಿದ್ರೆ, ಅಂತಹ ವಾಹನಗಳನ್ನು ಲಾಕ್​ಡೌನ್​​ ಮುಗಿಯುವವರೆಗೂ ಕಸ ವಿಲೇವಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಸದಾಶಿವ ಪ್ರಭು ಅವರು ಎಚ್ಚರಿಸಿದ್ದಾರೆ.

The post ಅನಗತ್ಯವಾಗಿ ಓಡಾಡಿದವರ ಗಾಡಿಗಳಲ್ಲಿ ಕಸ ವಿಲೇವಾರಿ ಮಾಡಿಸಿದ ಅಪರ ಜಿಲ್ಲಾಧಿಕಾರಿ appeared first on News First Kannada.

Source: newsfirstlive.com

Source link