ಬೆಂಗಳೂರು: ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನ ಪೊಲೀಸರು ಜಪ್ತಿಮಾಡಿದ್ದು. ನಗರ ಪೊಲೀಸರಿಂದ ವಾಹನ ಜಪ್ತಿ ಕಾರ್ಯಾಚರಣೆ ಮುಂದುವರೆದಿದೆ.

ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪೊಲೀಸರ ಕಾರ್ಯಚರಣೆ ನಡೆದಿದ್ದು, ದ್ವಿಚಕ್ರ ವಾಹನ, ಕಾರು, ಆಟೋ ಸೇರಿದಂತೆ ಒಟ್ಟು 832ವಾಹನಗಳನ್ನ ಇಂದು ವಶಪಡೆದುಕೊಳ್ಳಲಾಗಿದೆ. ದ್ವಿಚಕ್ರ ವಾಹನ -723. ಆಟೋ- 39. ಕಾರು- 70 ಜಪ್ತಿ ಮಾಡಲಾಗಿದೆ. 832 ವಾಹನಗಳನ್ನ ವಶಪಡಿಸಿಕೊಂಡಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆ NDMA ಌಕ್ಟ್ ಅಡಿ 15 ಪ್ರಕರಣ ದಾಖಲು ಮಾಡಲಾಗಿದೆ.

The post ಅನಗತ್ಯವಾಗಿ ರಸ್ತೆಗಿಳಿದ 832 ವಾಹನ ಸೀಜ್: ಒಂದೇ ದಿನ 15 NDMA ಕೇಸ್ appeared first on News First Kannada.

Source: newsfirstlive.com

Source link