ಹಾವೇರಿ: ಬೀದಿಯಲ್ಲಿ ಅಳುತ್ತಾ ಅನಾಥರಾಗಿ ನಿಂತಿದ್ದ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಯುವಕರು ರಕ್ಷಿಸಿ ಸುರಕ್ಷಿತವಾಗಿ ಬಾಲಭವನಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಈ ಘಟನೆ ನಡೆದಿದೆ.

ಇತ್ತೀಚೆಗೆ ಈ ಮಕ್ಕಳ ತಂದೆ ತೀರಿಕೊಂಡಿದ್ದು, ತಾಯಿ ಕುಡಿತದ ಚಟಕ್ಕೆ ದಾಸಳಾಗಿ ಮಕ್ಕಳನ್ನು ಬೀದಿಗೆ ಅಟ್ಟಿದ್ದಾಳೆ ಎನ್ನಲಾಗಿದೆ. ನಾಲ್ಕು ಮಕ್ಕಳ ಪೈಕಿ ಎರಡು ವರ್ಷದ ಮಗು ನಾಪತ್ತೆಯಾಗಿದೆ. ವಿಷಯ ತಿಳಿದ ಸ್ಥಳೀಯ ಯುವಕರಾದ ನಿಜಾಂ, ಪ್ರಕಾಶ ಮತ್ತು ಅವರ ತಂಡ ಈ ಮೂರು
ಮಕ್ಕಳು ಅಪಾಯಕ್ಕೆ ಸಿಲುಕಬಹುದು ಎಂಬ ಆತಂಕದಿಂದ ಅವರನ್ನು ಕೂಡಲೇ ರಕ್ಷಿಸಿ , ನಗರದ ಬಾಲಭವನಕ್ಕೆ ಕರೆತಂದಿದ್ದಾರೆ. ಅಲ್ಲಿನ ಸಿಬ್ಬಂದಿ ಪಾರ್ವತಮ್ಮ ಹುಂಡೆಕಾರ ಮತ್ತು ಸಂತೋಷ ಹೊಸಗೌಡರ ಅವರಿಗೆ ಮಕ್ಕಳನ್ನು ಹಸ್ತಾಂತರಿಸಿದ್ದಾರೆ.

 

ಸದ್ಯ ಮಕ್ಕಳು ಬಾಲಭವನದಲ್ಲಿ ಸುರಕ್ಷಿತವಾಗಿದ್ದು ಯುವಕರ ಮಾನವೀಯ ಕೆಲಸಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.

The post ಅನಾಥರಾಗಿ ಬೀದಿಯಲ್ಲಿ ಅಳುತ್ತಾ ನಿಂತಿದ್ದ 3 ಮಕ್ಕಳ ರಕ್ಷಣೆ: ಯುವಕರ ಕಾರ್ಯಕ್ಕೆ ಮೆಚ್ಚುಗೆ appeared first on News First Kannada.

Source: newsfirstlive.com

Source link