ಅನಾಥ ಮಕ್ಕಳನ್ನು ಸಂಬಂಧಿಕರು ಸಾಕಲಾಗದಿದ್ದರೆ ಇಲಾಖೆಯಿಂದ ದತ್ತು- ಶಶಿಕಲಾ ಜೊಲ್ಲೆ

ಅನಾಥ ಮಕ್ಕಳನ್ನು ಸಂಬಂಧಿಕರು ಸಾಕಲಾಗದಿದ್ದರೆ ಇಲಾಖೆಯಿಂದ ದತ್ತು- ಶಶಿಕಲಾ ಜೊಲ್ಲೆ

ದಾವಣಗೆರೆ: ರಾಜ್ಯದಲ್ಲಿ ಕೊರೊನಾ 2ನೇ ಅಲೆಯಿಂದ 59 ಮಕ್ಕಳು ಅನಾಥರಾಗಿದ್ದು.. 1 ಸಾವಿರ ಮಕ್ಕಳು ಏಕ ಪೋಷಕರನ್ನ ಹೊಂದಿದ್ದಾರೆ. ಅನಾಥ ಮಕ್ಕಳಿಗೆ ಸರ್ಕಾರದಿಂದ ಬಾಲ ಸೇವಾ ಯೋಜನೆಯಡಿ ಮಕ್ಕಳಿಗೆ 3 ಸಾವಿರ ರೂಪಾಯಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಎಸ್ ಎಸ್ ಎಲ್ ಸಿ ಪಾಸಾದ ಮಕ್ಕಳಿಗೆ ಲ್ಯಾಪ್ ಟ್ಯಾಪ್ ಮತ್ತು ಟ್ಯಾಬ್ ಕೊಡಲು ನಿರ್ಧಾರ ಮಾಡಲಾಗಿದೆ. 21 ವರ್ಷ ತುಂಬಿದ ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕೆ 1ಲಕ್ಷ ರೂಪಾಯಿ ನೀಡಲು ಸರ್ಕಾರದಿಂದ ನಿರ್ಣಯವಾಗಿದೆ. ಇನ್ನು ಸಂಬಂಧಿಕರಿಗೆ ಮಕ್ಕಳನ್ನ ಸಾಕಲು ಆಗದೆ ಇದ್ದಲ್ಲಿ ಅಂಥ ಮಕ್ಕಳನ್ನು ದತ್ತು ಪಡೆಯಲು ಇಲಾಖೆಯಿಂದ ನಿರ್ಧಾರವಾಗಿದೆ. ಎಂದು ದಾವಣಗೆರೆಯಲ್ಲಿ ಶಶಿಕಲಾ ಜೊಲ್ಲೆ ಹೇಳಿಕೆ ನೀಡಿದ್ದಾರೆ

The post ಅನಾಥ ಮಕ್ಕಳನ್ನು ಸಂಬಂಧಿಕರು ಸಾಕಲಾಗದಿದ್ದರೆ ಇಲಾಖೆಯಿಂದ ದತ್ತು- ಶಶಿಕಲಾ ಜೊಲ್ಲೆ appeared first on News First Kannada.

Source: newsfirstlive.com

Source link