ಬೆಂಗಳೂರು: ಅನಾಥಶವಗಳ ಅಂತ್ಯಸಂಸ್ಕಾರಕ್ಕೆ ಬೆಂಗಳೂರು ದಕ್ಷಿಣ ವಲಯದ ತಹಸೀಲ್ದಾರ್ ಮುಂದು ಬಂದಿದ್ದಾರೆ. ತಹಶಿಲ್ದಾರ್​ ಶಿವಪ್ಪ ಲಮಾಣಿ ಇದುವರೆಗೂ ಕೋವಿಡ್​ನಿಂದ ಮೃತಪಟ್ಟಿದ್ದ 20ಕ್ಕೂ ಹೆಚ್ಚು ಅನಾಥ ಶವಗಳಿಗೆ ತಾವರೆಕೆರೆ ಚಿತಾಗಾರದಲ್ಲಿ ಅಗ್ನಿ ಸ್ಪರ್ಶ ಮಾಡಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಕಾರಣ, ಕೋವಿಡ್​ನಿಂದ ಮೃತ ಪಟ್ಟಿದ್ದ ಅದೆಷ್ಟೋ ಜನ ಕುಟುಂಬಸ್ಥರು ಹಿಂದೇಟು ಹಾಕಿದ್ದರು.

ಈ ವೇಳೆ ತಾವೇ ಸ್ವತಃ ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರ ‌ನೆರವೇರಿಸಿದ್ದಾರೆ. ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸಿದ್ದ ತಹಶಿಲ್ದಾರ್ ಶಿವಪ್ಪ ಲಮಾಣಿ, ಇತರೆ ಸರ್ಕಾರಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

The post ಅನಾಥ ಶವಗಳಿಗೆ ಅಗ್ನಿ ಸ್ಪರ್ಶ ಮಾಡಿದ ತಹಶಿಲ್ದಾರ್ appeared first on News First Kannada.

Source: newsfirstlive.com

Source link