ಮಂಡ್ಯ: ಕೊರೊನಾ ಅನಾಥ ಶವಗಳ ಮುಕ್ತಿಗೆ, ರಾಜ್ಯ ಸರ್ಕಾರ ಮುಂದಾಗಿದ್ದು, ಕಾವೇರಿ ನದಿಗೆ ಸಾವಿರಕ್ಕೂ ಹೆಚ್ಚು ಅಸ್ಥಿಗಳನ್ನ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗಿದೆ.

May be an image of one or more people and people standing

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿರುವ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯ ಸಮೀಪದ ಕಾವೇರಿ ನದಿ ಬಳಿ ಈ ಕಾರ್ಯ ನಡೆದಿದೆ. ಪುರೋಹಿತರಾದ ಭಾನು ಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆದಿದ್ದು, 12ಕ್ಕೂ ಹೆಚ್ಚು ಪುರೋಹಿತರಿಂದ ಕೋವಿಡ್ ಮೃತರಿಗೆ ಶ್ರಾದ್ಧ ಕಾರ್ಯ ನೆರವೇರಿದೆ. ಕರ್ನಾಟಕ ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತಿದ್ದ ಸಚಿವ ಆರ್. ಅಶೋಕ್ ನದಿಗೆ ಇಳಿದು ಅಸ್ಥಿ ವಿಸರ್ಜನೆ ಮಾಡಿದ್ದಾರೆ.

ಇದು ನನ್ನ ಜೀವನದ ಭಾವನಾತ್ಮಕ ಘಳಿಗೆ. ಕಂದಾಯ ಸಚಿವನಾಗಿ ಇಂದು ನಿರ್ವಹಿಸಿದ ಕೆಲಸ ನನ್ನಲ್ಲಿ ಆತ್ಮತೃಪ್ತಿ ತಂದಿದೆ. ಈ ಕಾರ್ಯ ಕೇವಲ ಇಲ್ಲಷ್ಟೇ ಅಲ್ಲ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಅವರ ಜಿಲ್ಲೆಯಲ್ಲಿ ಹೀಗೆ ಕುಟುಂಬಸ್ಥರು ತೆಗೆದುಕೊಂಡು ಹೋಗದಿದ್ದ ಅಸ್ಥಿಗಳನ್ನ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲು ಸೂಚನೆ ನೀಡುತ್ತಿದ್ದೇನೆ. ಈ ಎಲ್ಲರ ಚಿತಾಭಸ್ಮ ಕಾವೇರಿ ಮಾತೆಯ ಒಡಲಲ್ಲಿ ಲೀನವಾಗಿವೆ. ಆ ಭಗವಂತ ಇವರೆಲ್ಲರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ -ಆರ್. ಅಶೋಕ್, ಸಚಿವ

May be an image of 4 people and people standing

ಇದೇ ವೇಳೆ ಮಾತನಾಡಿದ ಅವ್ರು, ಜೂನ್​7 ರ ಬಳಿಕ ಲಾಕ್​ಡೌನ್ ಮುಂದುವರೆಸುವುದು ಸೂಕ್ತ ಅನ್ನೋ ಅಭಿಪ್ರಾಯವನ್ನ ಕೊಟ್ಟಿದ್ದಾರೆ.  ಈಗಾಗಲೇ ಹಲವು ರಾಜ್ಯಗಳು ಲಾಕ್ ಡೌನ್ ವಿಸ್ತರಿಸಿವೆ. ರಾಜ್ಯದಲ್ಲಿ ಪ್ರತೀ ನಿತ್ಯ ಪಾಸಿಟಿವ್ ಕೇಸ್ 3 ಸಾವಿರಕ್ಕೆ ಇಳಿಯುವರೆಗೆ ಲಾಕ್​ಡೌನ್ ವಿಸ್ತರಿಸೋದು ಸೂಕ್ತ. ಈ ಬಗ್ಗೆ ಇಂದು ಸಂಜೆ ಸಿಎಂ ನೇತೃತ್ವದಲ್ಲಿ ಸಭೆ ಇದೆ. ಅಂತಿಮವಾಗಿ ಸಿಎಂ ನಿರ್ಧಾರ ಏನು ಅನ್ನೋದನ್ನ ಪ್ರಕಟಿಸ್ತಾರೆ.ಕೆಲವು ಸಚಿವರು ಲಾಕ್ ಡೌನ್ ವಿಸ್ತರಣೆ ಮಾಡೋದು ಬೇಡ ಅಂದಿರೋದು ಸತ್ಯ.
ಎಲ್ಲರಿಗೂ ಅವರವರ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ಇದೆ. ನನ್ ಪ್ರಕಾರ ಲಾಕ್ ಡೌನ್ ವಿಸ್ತರಣೆ ಮಾಡೋದು ಸೂಕ್ತ. ಈಗ ಸಡಿಲಿಕೆ‌ ಮಾಡಿ ಮತ್ತೆ ಸೋಂಕು ಹೆಚ್ಚಾದರೆ ಮತ್ತೆ ಮೊದಲಿಂದ ಬರಬೇಕಾಗುತ್ತದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳೋದು ಸೂಕ್ತ ಅನ್ನೋ ಅಭಿಪ್ರಾಯವನ್ನ ಕಂದಾಯ ಸಚಿವ  ಆರ್.ಅಶೋಕ್ ಹೇಳಿದ್ದಾರೆ.

 

 

The post ಅನಾಥ ಶವಗಳಿಗೆ ಆರ್. ಅಶೋಕ್ ತರ್ಪಣ; ಅಸ್ತಿ ವಿಸರ್ಜನೆಯನ್ನೂ ಮಾಡಿದ ಸಚಿವ appeared first on News First Kannada.

Source: newsfirstlive.com

Source link