ಅನಾರೋಗ್ಯದ ಮಧ್ಯೆಯೂ ‘ಯಶೋದಾ’ ಚಿತ್ರದ ಪ್ರಮೋಷನ್​​ಗಾಗಿ ಮರಳಿದ ನಟಿ ಸಮಂತಾ – actress samantha returned for the promtion of yashoda despite her illness


ನಟಿ ಸಮಂತಾ myositis​ ಎಂಬ ಅಪರೂಪದ ರೋಗದಿಂದ ಬಳಲುತ್ತಿದ್ದಾರೆ ಎಂದು ಕಳೆದ ವಾರ ಬಹಿರಂಗಪಡಿಸಿದ್ದರು. ಇದೀಗ ನಟಿ ಕೆಲಸಕ್ಕೆ ಮರಳಿದ್ದಾರೆ. ಜೊತೆಗೆ ಅವರ ಮುಂದಿನ ಸಿನಿಮಾ ‘ಯಶೋದಾ’ ಪ್ರಚಾರಕ್ಕಾಗಿ ಸಜ್ಜಾಗಿರುವ ಪೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.

ಅನಾರೋಗ್ಯದ ಮಧ್ಯೆಯೂ ‘ಯಶೋದಾ’ ಚಿತ್ರದ ಪ್ರಮೋಷನ್​​ಗಾಗಿ ಮರಳಿದ ನಟಿ ಸಮಂತಾ

ಸಮಂತಾ

Image Credit source: google

ಸಮಂತಾ ಬಹುಬೇಡಿಕೆಯ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವಾರ ತಮಗೆ ಇರುವ myositis​ ಎಂಬ ಹೆಸರಿನ ಅಪರೂಪದ ಕಾಯಿಲೆ ಇರುವ ಬಗ್ಗೆ ಮತ್ತು ಅದಕ್ಕೆ ತಾವು ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ಘೋಷಣೆ ಮಾಡಿದ್ದರು. ಈಗ ಅವರು ಅನಾರೋಗ್ಯದ ಮಧ್ಯೆಯೂ ಪ್ರಚಾರ ಆರಂಭಿಸಿದ್ದಾರೆ.

‘ನಾನು ಮಾನಸಿಕವಾಗಿ, ದೈಹಿಕವಾಗಿ ಸದೃಡವಾಗಿದ್ದೇನೆ. ಕೊನೆ ಕ್ಷಣದವರೆಗೂ ಹೋರಾಡುತ್ತೇನೆ ಮತ್ತು ಯಶೋದಾ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ನಿಮ್ಮ ಈ ಪ್ರೀತಿ ನನಗೆ ಸವಾಲುಗಳನ್ನು ಎದುರಿಸಲು ಶಕ್ತಿ ನೀಡಿದೆ. ಮತ್ತು ಈ ಕಾಯಿಲೆ ಗುಣವಾದ ಬಳಿಕ ಈ ವಿಷಯವನ್ನು ಹಂಚಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ’ ಎಂದು ಸಮಂತಾ ಬರೆದುಕೊಂಡಿದ್ದರು.

ಸಮಂತಾ ಈಗ ಕೆಲಸಕ್ಕೆ ಮರಳಿದ್ದಾರೆ. ಈ ಸುದ್ದಿಯು ಅವರ ಅಭಿಮಾನಿಗಳ ಮುಖದಲ್ಲಿ ಸಂತೋಷ ಮೂಡಿಸಿದೆ. ಸೋಮವಾರ (ನವೆಂಬರ್ 7) ಮಧ್ಯಾಹ್ನ ಸಮಂತಾ ಅವರು ಯಶೋದಾ ಚಿತ್ರದ ಪ್ರಮೋಷನ್​ಗಾಗಿ ಸಜ್ಜಾಗಿರುವ ಪೋಟೋದೊಂದಿಗೆ ‘ಯಶೋದಾ ಪ್ರಚಾರಕ್ಕಾಗಿ ನವೆಂಬರ್ 11ರಂದು ಭೇಟಿಯಾಗೋಣ’ ಎಂದು ಬರೆದುಕೊಂಡಿದ್ದಾರೆ.

ಸಮಂತಾ ಅವರು ಕೊನೆಯದಾಗಿ ವಿಜಯ್ ಸೇತುಪತಿ ಮತ್ತು ನಯನತಾರಾ ಜೊತೆಯಲ್ಲಿ ‘ಕಾದು ವಾಕುಲ ರೆಂಡು ಕಾದಲ್’​ ಚಿತ್ರದಲ್ಲಿ ನಟಿಸಿದ್ದರು. ‘ಅರೇಂಜ್​ಮೆಂಟ್ಸ್​ ಆಫ್ ಲವ್’ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಪತ್ತೇದಾರಿ ಸಂಸ್ಥೆಯನ್ನು ನಡೆಸುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.