‘ಅನಿಲ್​​ ಕುಂಬ್ಳೆಗಿಂತಲೂ ಶ್ರೇಷ್ಠ ಸಾಧನೆ ಈ ಆಟಗಾರನದ್ದು’- ಖ್ಯಾತ ಕ್ರಿಕೆಟಿಗ ದೀಪಕ್​​ ಪಟೇಲ್​​


ಟೆಸ್ಟ್ ಇನಿಂಗ್ಸ್‌ 10 ವಿಕೆಟ್‌ ಸಾಧಕರ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ ಜಿಮ್ಮಿ ಲೇಕರ್‌ ಹಾಗೂ ಅನಿಲ್‌ ಕುಂಬ್ಳೆ. ಇವರಿಗಿಂತ ಎಜಾಝ್‌ ಪಟೇಲ್‌ ಪ್ರದರ್ಶನದ ಹಾದಿ ಅತ್ಯುತ್ತಮ ಎಂದು ಕಿವೀಸ್‌ ಮಾಜಿ ಆಟಗಾರ ದೀಪಕ್‌ ಪಟೇಲ್‌ ಅಭಿಪ್ರಾಯಪಟ್ಟಿದ್ದಾರೆ.

ಎಜಾಜ್​‌ಗೆ ದೀರ್ಘಾವಧಿ ಕೋಚ್‌ ಆಗಿದ್ದವರು ದೀಪಕ್ ಪಟೇಲ್‌. ಈ ಬಗ್ಗೆ ಮಾತಾಡುವಾಗ ಅನಿಲ್‌ ಕುಂಬ್ಳೆ ಹಾಗೂ ಜಿಮ್ಮಿ ಲೇಕರ್‌ ತವರಿನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ ತೆಗೆದು ಸಾಧನೆ ಮಾಡಿದ್ದರು. ಆದರೆ, ಅಜಾಝ್‌ ಪಟೇಲ್‌ ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದರು. ಹೀಗಾಗಿ ಈ ಇಬ್ಬರು ದಿಗ್ಗಜರಿಗಿಂತ ಇದು ಶ್ರೇಷ್ಠವಾದ ಸಾಧನೆ. ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ ಕಬಳಿಸುವುದು ಸುಲಭದ ಮಾತಲ್ಲ ಎಂದರು.

The post ‘ಅನಿಲ್​​ ಕುಂಬ್ಳೆಗಿಂತಲೂ ಶ್ರೇಷ್ಠ ಸಾಧನೆ ಈ ಆಟಗಾರನದ್ದು’- ಖ್ಯಾತ ಕ್ರಿಕೆಟಿಗ ದೀಪಕ್​​ ಪಟೇಲ್​​ appeared first on News First Kannada.

News First Live Kannada


Leave a Reply

Your email address will not be published. Required fields are marked *