ಶಿವಮೊಗ್ಗ: ಅನಿವಾರ್ಯ ಆದರೆ ಮತ್ತೊಂದು ಪ್ಯಾಕೇಜ್ ಬಗ್ಗೆ ಚಿಂತನೆ ಮಾಡಲಾಗುವುದು ಅಂತಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾತನಾಡಿದ ಅವರು, ಕನಿಷ್ಠ ಶೇ.5ರಷ್ಟು ಪಾಸಿಟಿವಿಟಿ ರೇಟ್ ಬರಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ ಶಿವಮೊಗ್ಗ ಸೇರಿದಂತೆ ಶಿಕಾರಿಪುರದಲ್ಲಿ ಕೋವಿಡ್ ಜಾಸ್ತಿ ಪ್ರಮಾಣದಲ್ಲಿದೆ. ಅದನ್ನು ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಲಾಕ್ ಡೌನ್ ಇನ್ನೂ ಒಂದು ವಾರ ವಿಸ್ತರಿಸಿರುವುದರಿಂದ ಕೋವಿಡ್ ಹತೋಟಿಗೆ ಬರುತ್ತದೆ ಎಂಬ ವಿಶ್ವಾಸ ಇದೆ. ಇದಕ್ಕೆ ಜನ ಸಹಕಾರ ಕೊಡಬೇಕು. ಇನ್ನೊಂದು ವಾರದಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕೆ ಬರುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಕಳೆದ ಎಂಟು ತಿಂಗಳಿಂದ ಆದಾಯ ಕುಸಿತವಾಗಿದೆ. ತೆರಿಗೆ ಸಂಗ್ರಹ ಕಡಿಮೆ ಆಗಿದೆ. ಇದರ ನಡುವೆಯೂ ಅಭಿವೃದ್ಧಿ ಕಾರ್ಯಕ್ಕೆ, ನೀರಾವರಿ ಯೋಜನೆಗೆ ಹಣಕಾಸಿನ ಧಕ್ಕೆ ಆಗದಂತೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣಕಾಸು ನೆರವಿಗೆ ಮನವಿ ಮಾಡಿದ್ದೇನೆ. ನಾಲ್ಕು ತಿಂಗಳು ಕಳದರೆ ಆರ್ಥಿಕ ಪರಿಸ್ಥಿತಿ ಸುಧಾರಿದಲಿದೆ. ಈಗಾಗಲೇ ಬಡವರಿಗೆ ತಲುಪುವಂತಹ ಎರಡು ಪ್ಯಾಕೇಜ್ ನೀಡಲಾಗಿದೆ. ಮುಂದೆ ಅನಿವಾರ್ಯ ಆದರೆ ಮತ್ತೊಂದು ಪ್ಯಾಕೇಜ್ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ದರ ಜಾಸ್ತಿಯಾಗಿದ್ದು ಕಾಂಗ್ರೆಸ್ ನವರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಲಾರೆ. ಎಲ್ಲಾ ಪಕ್ಷಗಳು ಈ ಸಂದರ್ಭದಲ್ಲಿ ಸಹಕಾರ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಮುಂದಾಲೋಚನೆನಿಂದ ಜೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನವರು ರಾಜಕಾರಣ ಮಾಡದೆ ಸಹಕಾರ ಕೊಡಬೇಕು. ನಾಳೆ, ನಾಡಿದ್ದರಲ್ಲಿ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಬರಲಿದೆ. ಎಲ್ಲಾ ಜಿಲ್ಲೆಗೂ ಜನಸಂಖ್ಯೆಗೆ ಅನುಗುಣವಾಗಿ ವ್ಯಾಕ್ಸಿನ್ ಸಿಗಲಿದೆ. ರಾಜ್ಯದ ಉಸ್ತುವಾರಿಯಾದ ಅರುಣ್ ಸಿಂಗ್ ರಾಜ್ಯಕ್ಕೆ ಬರಲಿದ್ದಾರೆ. ಎರಡು ದಿನ ಇದ್ದು ಒಂದೆರಡು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಬಿಎಸ್​ವೈ ತಿಳಿಸಿದ್ರು.

The post ಅನಿವಾರ್ಯವಾದ್ರೆ ಮತ್ತೊಂದು ಪ್ಯಾಕೇಜ್ ಬಗ್ಗೆ ಚಿಂತನೆ -ಸಿಎಂ appeared first on News First Kannada.

Source: newsfirstlive.com

Source link