ಅನುಪಮಾಗೆ ಸ್ಪೆಷಲ್ ಗಿಫ್ಟ್​ ಕೊಟ್ಟ ಸೃಜನ್; ಕಣ್ಣೀರಿಟ್ಟ ನಿರೂಪಕಿ


ಕಳೆದ ವಾರ ಪುಟಾಣಿ ಮಕ್ಕಳು ಪ್ರೀತಿಯ ಅಮ್ಮಂದಿರಗೆ ಮುದ್ದಾಗಿ ಲೇಟರ್​ ಬರೆದು, ತಾವೇ ಖುದ್ದಾಗಿ​ ಹೋಗಿ ಗಿಫ್ಟ್​ ತಂದು ಸರ್​ಪ್ರೈಸ್​ ನೀಡಿದ್ರು. ಮಕ್ಕಳ ಸರ್​ಪ್ರೈಸ್ ನೋಡಿ ಖುಷಿಯಿಂದ ಕಣ್ಣೀರಿಟ್ಟದ್ದರು ಅಮ್ಮಂದಿರು. ತಾಯಿ-ಮಗು ನಡುವಿನ ಬಾಂಧವ್ಯ ಆ ಸ್ನೇಹ, ಪ್ರೀತಿಗೆ ನನ್ನಮ್ಮ ಸೂಪರ್​ ಸ್ಟಾರ್​ ಸಾಕ್ಷಿಯಾಗಿದೆ.

ಈ ಶೋ ಕೇವಲ ಮನರಂಜನೆಗೆ ಸೀಮಿತವಾಗದೇ ಸಂಬಂಧಗಳನ್ನ ಸೆಲಬ್ರೇಷನ್​ ಮಾಡುತ್ತಿರುವುದು ವಿಶೇಷ. ಮೊನ್ನೆ ಸೃಜನ್​ ಒಂದು ಸ್ಪೆಷಲ್​ ಮೂಮೆಂಟ್​ ಅನ್ನ ಕ್ರಿಯೇಟ್​ ಮಾಡಿ, ನಿರೂಪಕಿ ಅನುಪಮಾಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ರು. ಸೃಜನ ಪ್ರೀತಿ, ಕಾಳಜಿಗೆ ಅನು ಮಾತ್ರವಲ್ಲ ಇಡೀ ವೇದಿಕೆ ಭಾವುಕವಾಗಿತ್ತು.

ಅನುಗೆ ಮಾತ್ರ ಸೃಜಾ ಗಿಫ್ಟ್​ ತಂದಿರಲಿಲ್ಲ. ಜಡ್ಜ್​​ಗಳಾದ ತಾರಮ್ಮ ಹಾಗೂ ಅನು ಪ್ರಭಾಕರ್​ ಅವ್ರಿಗೂ ಚಂದದ ಉಡುಗೊರೆ ನೀಡಿದ್ರು. ತಾರಮ್ಮ ಅಂತೂ ಸೀರೆಯಲ್ಲಿ ಱಂಪ್​ ವಾಕ್​ ಮಾಡಿ, ಬೆಡಗಿನ ಝಲಕ್​ ತೋರಿಸಿದ್ರು. ಇನ್ನೂ ಸೃಜ ಅನು ಪ್ರಭಾಕರ್​ ಅವ್ರಿಗೂ ಕೂಡ ಸೀಲ್ವರ್​ ಕೊಟೆಡ್​ ನೆಕ್​ ಪೀಸ್​ ಗಿಫ್ಟ್​ ಮಾಡಿದ್ರು. ಒಟ್ನಲ್ಲಿ ನನ್ನಮ್ಮ ಸೂಪರ್​ ಸ್ಟಾರ್​ನ ಸೂಪರ್​ ವುಮನ್ಸ್​ಗೆ ಸರ್​ಪ್ರೈಸ್​ ಗಿಫ್ಟ್ಸ್ ನೀಡಿ ಸ್ಪೆಷಲ್​ ಮೂಮೆಂಟ್ ಕ್ರಿಯೇಟ್​ ಮಾಡಿದ್ರು ಸೃಜನ್​.

The post ಅನುಪಮಾಗೆ ಸ್ಪೆಷಲ್ ಗಿಫ್ಟ್​ ಕೊಟ್ಟ ಸೃಜನ್; ಕಣ್ಣೀರಿಟ್ಟ ನಿರೂಪಕಿ appeared first on News First Kannada.

News First Live Kannada


Leave a Reply

Your email address will not be published. Required fields are marked *