ಮುಂಬೈ: ನಟಿ ಅನುಷ್ಕಾ ಶರ್ಮಾಗೆ ಮಗುವಾದ ನಂತರ ಕೂದಲು ಉದುರುವಿಕೆ ಸಮಸ್ಯೆ ಕಾಡುತ್ತಿದೆ. ಹೀಗಾಗಿ ನಟಿ ಪರಿಹಾರ ಕಂಡುಕೊಂಡಿರುವ ಕುರಿತಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸರಳವಾಗಿ ಮಾಡಿ ಮಟನ್ ಮಸಾಲಾ

ಮಗುವಾದ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್‍ಗಳಿಂದಾಗಿ ಆಗುವ ಬದಲಾವಣೆಗಳಿಂದಾಗಿ ಕೂದಲು ಉದುರುವುದು, ದಪ್ಪಗಾಗುವುದು ಹೀಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಟಿ ಅನುಷ್ಕಾ ಶರ್ಮಾ ಅವರಿಗೂ ಈಗ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆ.

 

View this post on Instagram

 

A post shared by AnushkaSharma1588 (@anushkasharma)

ಮಗುವಾದ ನಂತರ ಅನುಷ್ಕಾ ಶರ್ಮಾ ಅವರಿಗೂ ಕೂದಲು ಉದುರುವ ಸಮಸ್ಯೆ ಎದುರಾಗಿದ್ದು, ಶರ್ಮಾ ಹೊಸ ಹೇರ್ ಕಟ್ ಮೊರೆ ಹೋಗಿದ್ದಾರೆ. ಸೋನಮ್ ಕಪೂರ್ ಅವರ ಬಳಿಯಿಂದ ಸಲಹೆ ಪಡೆದುಕೊಂಡಿದ್ದಾರಂತೆ. ಈ ಕುರಿತಾಗಿ ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿರುವ ಚಿತ್ರಗಳ ಜೊತೆಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma)

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ವಾಮಿಕಾ ಎಂಬ ಮಗಳಿರುವುದು ಗೊತ್ತೇ ಇದೆ. ಈ ಸೆಲೆಬ್ರಿಟಿ ಜೋಡಿ ಮಗಳ ಆರೈಕೆ ಮಾಡುತ್ತಾ ಅಪ್ಪ-ಅಮ್ಮನಾಗಿರುವ ಸಮಯವನ್ನು ಸಖತ್ತಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ನಟಿಯಾಗಿರುವ ಕಾರಣಕ್ಕೆ ಅವರ ಸೌಂದರ್ಯ ಹಾಗೂ ಫಿಟ್ನೆಸ್ ಬಗ್ಗೆ ಕಾಳಜಿ ಮಾಡುವುದು ಸಹಜ. ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ನಟಿ ಮಗಳು ಹಾಗೂ ಗಂಡನ ಜೊತೆ ಕಾಲ ಕಳೆಯುತ್ತಿದ್ದಾರೆ.

The post ಅನುಷ್ಕಾ ಶರ್ಮಾಗೆ ಕಾಡುತ್ತಿದೆ ಕೂದಲುದುರುವ ಸಮಸ್ಯೆ appeared first on Public TV.

Source: publictv.in

Source link