ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ | Mysuru Fan Send Marriage Invitation to Anushka Sharma In Kannada


ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ

ಮದುವೆ ಕರೆಯೋಲೆ-ಅನುಷ್ಕಾ

ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಜತೆ ಫೋಟೋ ಸಿಕ್ಕರೆ ಅಭಿಮಾನಿಗಳಿಗೆ ಅದುವೇ ದೊಡ್ಡ ಸಂಭ್ರಮ. ಈ ಫೋಟೋಗಳನ್ನು ಎಲ್ಲ ಕಡೆಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಇನ್ನು ಕೆಲ ಸೆಲೆಬ್ರಿಟಿಗಳು ಅಭಿಮಾನಿಗಳು ಮಾಡುವ ಟ್ವೀಟ್​ಗೆ ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ ಉದಾಹರಣೆ ಸಾಕಷ್ಟಿದೆ. ಇದು ಕೂಡ ಅಭಿಮಾನಿಗಳ ಪಾಲಿಗೆ ವಿಶೇಷವೇ. ಇನ್ನೂ ಕೆಲ ಸೆಲೆಬ್ರಿಟಿಗಳು ಅಭಿಮಾನಿಯ ಮದುವೆಗೆ ಆಗಮಿಸಿದ ಉದಾಹರಣೆಯೂ ಇದೆ. ಈಗ ಅನುಷ್ಕಾ ಶರ್ಮಾಗೆ  ಕರ್ನಾಟಕದ ಅಭಿಮಾನಿಯೊಬ್ಬರಿಗೆ ಸರ್​ಪ್ರೈಸ್​ ನೀಡಿದ್ದಾರೆ.

ಮೈಸೂರಿನ ನಯನಾ ಮತ್ತು ರುದ್ರೇಶ್​ ಮದುವೆ ಇದೇ ನವೆಂಬರ್ 24ರಂದು ನಡೆಯುತ್ತಿದೆ. ಈ ಮದುವೆಯ ಆಮಂತ್ರಣ ಪತ್ರವನ್ನು ಅನುಷ್ಕಾ ಶರ್ಮಾಗೆ ಕಳುಹಿಸಲಾಗಿತ್ತು. ಇದರ ಜತೆಗೆ ಸ್ವೀಟ್​ಗಳನ್ನು ಕೂಡ ನೀಡಲಾಗಿದ್ದು, ಇದರ ಜತೆಗೆ ಒಂದು ಪತ್ರ ಕೂಡ ಬರೆಯಲಾಗಿದೆ. ಈ ಫೋಟೋವನ್ನು ಅನುಷ್ಕಾ ಶರ್ಮಾ ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ.

‘ಇದೊಂದು ಅತಿ ಮಧುರವಾದ ಮದುವೆ ಆಮಂತ್ರಣ. ಧನ್ಯವಾದಗಳು ನಯನಾ. ನೀನು ಅತ್ಯಂತ ಸುಂದರ ವಧುವಾಗುತ್ತೀಯಾ’ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಕರ್ನಾಟಕದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಂದಹಾಗೆ, ಈ ನಯನಾ ಯಾರು ಎನ್ನುವ ವಿಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಅವರು ಯಾರು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

2018ರಲ್ಲಿ ತೆರೆಕಂಡಿದ್ದ ‘ಜೀರೋ’ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಟಿಸಿದ್ದರು. ಇದಾದ ನಂತರ ಅವರ ನಟನೆಯ ಯಾವ ಸಿನಿಮಾಗಳೂ ತೆರೆಗೆ ಬಂದಿಲ್ಲ. ಅನುಷ್ಕಾ ಸದ್ಯ ನಿರ್ಮಾಣ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟನೆಗೆ ಬೇಗ ಕಮ್​ಬ್ಯಾಕ್​ ಮಾಡಲಿ ಎಂಬುದು ಅಭಿಮಾನಿಗಳ ಕೋರಿಕೆ. ಇತ್ತೀಚೆಗೆ ಟಿ20  ವಿಶ್ವ​ಕಪ್​ ದುಬೈನಲ್ಲಿ ನಡೆದಿತ್ತು. ಟೀಂ ಇಂಡಿಯಾ ಕೂಡ ಇದರಲ್ಲಿ ಭಾಗಿಯಾಗಿತ್ತು. ಈ ವೇಳೆ ಅನುಷ್ಕಾ ಕೂಡ ದುಬೈಗೆ ತೆರಳಿದ್ದರು.

ಇದನ್ನೂ ಓದಿ: Virat Kohli: ಟೀಮ್ ಇಂಡಿಯಾದಲ್ಲಿ ಇನ್ಮುಂದೆ ವಿರಾಟ್ ಕೊಹ್ಲಿಯ ಪಾತ್ರವೇನು? ರೋಹಿತ್ ಶರ್ಮಾ ಹೇಳಿದ್ದೇನು?

ಸ್ವಿಮ್ ಸೂಟ್​​ನಲ್ಲಿ ಮಿಂಚಿದ ಅನುಷ್ಕಾ ಶರ್ಮಾ

TV9 Kannada


Leave a Reply

Your email address will not be published. Required fields are marked *