ಅನು ಕಾವಲಿಗೆ ನಿಂತ ಸಂಜು; ನೆನಪಿಗೆ ಬರುತ್ತಿದ್ದಾನೆ ಆರ್ಯವರ್ಧನ್ – Jothe Jotheyali Serial Update Sanju became close to Anu


ಈಗ ವಠಾರದಲ್ಲಿ ನಡೆಯುತ್ತಿರುವ ಎಂಗೇಜ್​ಮೆಂಟ್​ಗೆ ಸಂಜು ಬಂದಿದ್ದಾನೆ. ಈ ವೇಳೆ ಮನೆಯ ಹೊರ ಭಾಗದಲ್ಲಿ ಆತನಿಗೆ ಝೇಂಡೆ ಕಾಣಿಸಿದ್ದಾನೆ. ಇದರಿಂದ ಅನುಗೆ ತೊಂದರೆ ಇದೆ ಎಂಬ ಅನುಮಾನ ಮೂಡಿದೆ. ಈ ಕಾರಣಕ್ಕೆ ಅನುನ ಎಚ್ಚರಿಸಿದ್ದಾನೆ ಸಂಜು.

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜು ವಠಾರಕ್ಕೆ ಬಂದಿದ್ದ. ಅಲ್ಲಿ ಅನು ಗೆಳತಿಯ ಎಂಗೇಜ್​ಮೆಂಟ್ ಸಿದ್ಧತೆಗಳು ನಡೆಯುತ್ತಿದ್ದವು. ಈ ಎಂಗೇಜ್​ಮೆಂಟ್​​ನಲ್ಲಿ ಸಂಜು ಕೂಡ ಭಾಗವಹಿಸಲು ನಿರ್ಧರಿಸಿದ್ದಾನೆ. ಅನು ಮನೆಯಲ್ಲೇ ಆತ ಉಳಿದುಕೊಂಡಿದ್ದಾನೆ. ಸಂಜುಗೋಸ್ಕರ ಝೇಂಡೆ ಪರಿತಪಿಸುತ್ತಿದ್ದಾನೆ. ಸಂಜುನೇ ಆರ್ಯವರ್ಧನ್ ಎನ್ನುವ ಸತ್ಯ ಆತನಿಗೆ ತಿಳಿದು ಹೋಗಿದೆ.

ಅನು ಕಾವಲಿಗೆ ನಿಂತ ಸಂಜು

ಅನುನ ಕೊಲ್ಲಲು ಝೇಂಡೆ ಪ್ಲ್ಯಾನ್ ರೂಪಿಸಿದ್ದ. ಈ ವಿಚಾರ ಸಂಜುಗೆ ತಿಳಿದಿದೆ. ಆರ್ಯವರ್ಧನ್​ನ ಅಸ್ಥಿ ಬಿಡಲು ನದಿ ತೀರಕ್ಕೆ ಹೋದಾಗ ಅಲ್ಲಿ ಅನುನ ಕೊಲ್ಲಲು ಪ್ಲ್ಯಾನ್ ನಡೆದಿತ್ತು. ಇದರ ಹಿಂದೆ ಝೇಂಡೆ ಕೈವಾಡ ಇದೆ ಎನ್ನುವ ವಿಚಾರದಲ್ಲಿ ಸಂಜುಗೆ ಅನುಮಾನ ಬಂದಿದೆ. ಇದನ್ನು ಅನು ಎದರು ಆತ ಪ್ರತಿಪಾದಿಸುತ್ತಲೇ ಬರುತ್ತಿದ್ದಾನೆ. ಇದನ್ನು ಆರಂಭದಲ್ಲಿ ನಿರಾಕರಿಸುತ್ತಾ ಬಂದಿದ್ದಳು ಅನು.

ಈಗ ವಠಾರದಲ್ಲಿ ನಡೆಯುತ್ತಿರುವ ಎಂಗೇಜ್​ಮೆಂಟ್​ಗೆ ಸಂಜು ಬಂದಿದ್ದಾನೆ. ಈ ವೇಳೆ ಮನೆಯ ಹೊರ ಭಾಗದಲ್ಲಿ ಆತನಿಗೆ ಝೇಂಡೆ ಕಾಣಿಸಿದ್ದಾನೆ. ಇದರಿಂದ ಅನುಗೆ ತೊಂದರೆ ಇದೆ ಎಂಬ ಅನುಮಾನ ಮೂಡಿದೆ. ಈ ಕಾರಣಕ್ಕೆ ಅನುನ ಎಚ್ಚರಿಸಿದ್ದಾನೆ ಸಂಜು.

‘ನೀವು ಹೆದರಬೇಕಿಲ್ಲ. ಝೇಂಡೆಯನ್ನು ನಾನು ಮೊದಲಿನಿಂದಲೂ ಬಲ್ಲೆ. ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ’ ಎಂದಿದ್ದಾಳೆ ಅನು ಇದನ್ನು ಕೇಳಿ ಸಂಜು ನಿಟ್ಟುಸಿರು ಬಿಟ್ಟಿದ್ದಾನೆ. ಮತ್ತೊಂದು ಕಡೆ ಸಂಜು ಇಷ್ಟೊಂದು ಕೇರ್ ಮಾಡುತ್ತಿದ್ದಾನಲ್ಲಾ ಎನ್ನುವ ವಿಚಾರಕ್ಕೆ ಅನು ಸಂತಸಪಟ್ಟಿದ್ದಾಳೆ. ಅತ್ತ ಇಷ್ಟೆಲ್ಲ ಕಾಳಜಿ ತೋರುವ ಅವಶ್ಯಕತೆ ಏನಿತ್ತು ಎನ್ನುವ ಪ್ರಶ್ನೆಯೂ ಆಕೆಯನ್ನು ಕಾಡಿದೆ. ಈ ವಿಚಾರದಲ್ಲಿ ಆಕೆ ಗೊಂದಲ್ಲಿದ್ದಾಳೆ.

ಸಂಜು ಬಳಿ ಬಂದ ಝೇಂಡೆ

ವಠಾರದಲ್ಲಿರುವ ಅನು ಮನೆಯ ಹೊರ ಭಾಗದಲ್ಲಿ ಸಂಜು ಮಲಗಿದ್ದ. ಆಗ ಝೇಂಡೆ ಅಲ್ಲಿಗೆ ಆಗಮಿಸಿದ್ದಾನೆ. ಸಂಜು ಮಲಗಿದ್ದನ್ನು ನೋಡಿ ಆತನನ್ನು ಮಾತನಾಡಿಸಲು ಝೇಂಡೆ ಹಿಂಜರಿದಿದ್ದಾನೆ. ಹೀಗಾಗಿ ಆತ ಮರಳಿ ಹೋಗಿದ್ದಾನೆ. ಇದನ್ನು ಸಂಜು ಮತ್ತೊಂದು ರೀತಿಯಲ್ಲಿ ಭಾವಿಸಿದ್ದಾನೆ. ಅನು ಮನೆಯನ್ನು ತಾನು ಕಾಯುತ್ತಿದ್ದೇನೆ ಎನ್ನುವ ಭಾವನೆಯಲ್ಲಿ ಆತ ಇದ್ದಾನೆ. ಝೇಂಡೆ ಬಂದು ಹಾಗೆ ಅರ್ಧಕ್ಕೆ ತೆರಳಿರುವುದನ್ನು ನೋಡಿ ತನ್ನನ್ನು ನೋಡಿ ಝೇಂಡೆ ಹೆದರಿದ ಎಂದುಕೊಂಡಿದ್ದಾನೆ ಸಂಜು.

ಝೇಂಡೆ ಮನೆಯಿಂದ ಹೊರ ಹೋಗುತ್ತಿರುವುದನ್ನು ಸಂಜು ವಿಡಿಯೋ ಮಾಡಿ ಇಟ್ಟುಕೊಂಡಿದ್ದಾನೆ. ಇದನ್ನು ಅನುಗೆ ತೋರಿಸುವ ಉದ್ದೇಶ ಅವನದು. ಈಗಾಗಲೇ ಸಂಜು ಪಾಲಿಗೆ ಝೇಂಡೆ ವಿಲನ್ ಆಗಿದ್ದಾನೆ. ಹೀಗಾಗಿ ಆತನ ಬಗ್ಗೆ ಒಳ್ಳೆಯ ಗೌರವ ಮೂಡುವುದು ಅನುಮಾನವೇ.

ಝೇಂಡೆ ಆಲೋಚನೆಯೇ ಬೇರೆ

ಝೇಂಡೆ ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದಾನೆ. ಆತನಿಗೆ ವರ್ಧನ್ ಕಂಪನಿಯ ಆಸ್ತಿಯನ್ನು ಕಬಳಿಸಬೇಕು ಎನ್ನುವ ಉದ್ದೇಶ ಇದೆ. ಇದಕ್ಕೆ ಆರ್ಯನ ಸಹಾಯ ಆತನಿಗೆ ಅಗತ್ಯವಾಗಿ ಬೇಕಿದೆ. ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ತಿಳಿದು ಹೋಗಿದೆ. ಈ ಕಾರಣಕ್ಕೆ ಝೇಂಡೆ ಬೇರೆಬೇರೆ ಪ್ಲ್ಯಾನ್ ರೂಪಿಸುತ್ತಿದ್ದಾನೆ. ಹೇಗಾದರೂ ಮಾಡಿ ಸಂಜುನ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದು ಆತನ ಉದ್ದೇಶ.

ಮತ್ತೊಂದು ಕಡೆ ವಿಶ್ವನ (ಸಂಜು) ಪತ್ನಿ ಆರಾಧನಾ ಸಂಜುನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುವ ಹಠಕ್ಕೆ ಬಿದ್ದಿದ್ದಾಳೆ.  ಇದು ಕೂಡ ಝೇಂಡೆಗೆ ತಲೆಬಿಸಿ ಮೂಡಿಸಿದೆ. ಆತನನ್ನು ಹೇಗಾದರೂ ಮಾಡಿ ಇಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಆತ ಇದ್ದಾನೆ.

TV9 Kannada


Leave a Reply

Your email address will not be published.