ಅನೈತಿಕ ಸಂಬಂಧ ಶಂಕಿಸಿ ಪತ್ನಿಗೆ ಚಾಕು ಇರಿದ ಪತಿ; ಹೆಂಡತಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಗಂಡ ಖಾಕಿ ವಶಕ್ಕೆ | Husband knife attack on wife over illegal affair in bengaluru


ಅನೈತಿಕ ಸಂಬಂಧ ಶಂಕಿಸಿ ಪತ್ನಿಗೆ ಚಾಕು ಇರಿದ ಪತಿ; ಹೆಂಡತಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಗಂಡ ಖಾಕಿ ವಶಕ್ಕೆ

ಸಾಂದರ್ಭಿಕ ಚಿತ್ರ

26 ವರ್ಷಗಳ ಹಿಂದೆ ಮಂಜುಳಾರನ್ನು ವಿವಾಹವಾಗಿದ್ದ ರವಿಗೆ ತನ್ನ ಪತ್ನಿ ಮೇಲೆ ಶಂಕೆ ಉಂಟಾಗಿತ್ತು. ಅನೈತಿಕ ಸಂಬಂಧವಿರುವ ಬಗ್ಗೆ ನಿನ್ನೆ ಗಂಡ-ಹೆಂಡತಿ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮಂಜುಳಾಗೆ ರವಿ ಚಾಕು ಇರಿದಿದ್ದಾನೆ.

ಬೆಂಗಳೂರು: ಪತ್ನಿ ಮೇಲೆ ಅನೈತಿಕ(Illegal Affair) ಸಂಬಂಧ ಶಂಕಿಸಿ ಪತ್ನಿಗೆ ಪತಿ ಚಾಕು ಇರಿದ ಘಟನೆ ಬೆಂಗಳೂರಿನ ಕೆಂಗೇರಿಯ ವಿನಾಯಕ ಲೇಔಟ್ನಲ್ಲಿ ನಡೆದಿದೆ. ಮಂಜುಳಾ (48) ಚಾಕು ಇರಿತಕ್ಕೊಳಗಾದ ಮಹಿಳೆ. ಪತಿ ರವಿ (48) ಮಂಜುಳಾ ಕುತ್ತಿಗೆ, ಎದೆ, ಕೈಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. 26 ವರ್ಷಗಳ ಹಿಂದೆ ಮಂಜುಳಾರನ್ನು ವಿವಾಹವಾಗಿದ್ದ ರವಿಗೆ ತನ್ನ ಪತ್ನಿ ಮೇಲೆ ಶಂಕೆ ಉಂಟಾಗಿತ್ತು. ಅನೈತಿಕ ಸಂಬಂಧವಿರುವ ಬಗ್ಗೆ ನಿನ್ನೆ ಗಂಡ-ಹೆಂಡತಿ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮಂಜುಳಾಗೆ ರವಿ ಚಾಕು ಇರಿದಿದ್ದಾನೆ. ಗಾಯಾಳು ಮಂಜುಳಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಕೆಂಗೇರಿ ಠಾಣೆ ಪೊಲೀಸರು ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪತ್ನಿ ಪ್ರಿಯಕರನ್ನು ಕೊಂದು ಸುಟ್ಟಿದ್ದ ಆರೋಪಿ ಬಂಧಿಸಿದ ಪೊಲೀಸರು
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಠಾಣೆ ಪೊಲೀಸರು ಪತ್ನಿ ಪ್ರಿಯಕರನ್ನು ಕೊಂದು ಸುಟ್ಟಿದ್ದ ಆರೋಪಿ ಬಾಬಾವಲಿಯನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಡಿ.ಜೆ.ಹಳ್ಳಿ ನಿವಾಸಿ ಸೈಯದ್ ಮುಸ್ತಫಾ ಕೊಲೆಯಾಗಿತ್ತು. ಬಾಬಾವಲಿ ಪತ್ನಿ ಸಲ್ಮಾ ಜತೆ ಅನೈತಿಕ ಸಂಬಂಧ ಹೊಂದಿದ್ದ ಮುಸ್ತಫಾ ಮದ್ಯಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಾಗ ಕತ್ತು ಹಿಸುಕಿ ಬಾಬಾವಲಿ ಕೊಂದಿದ್ದ. ಮುಸ್ತಫಾನನ್ನ ಕೊಂದು ಶವ ಸುಟ್ಟಿದ್ದ.ಹತ್ಯೆಯಾದ ಮುಸ್ತಫಾ, ಬಾಬಾವಲಿ ಇಬ್ಬರೂ ಡಿ.ಜೆ.ಹಳ್ಳಿ ನಿವಾಸಿಗಳು. ಸದ್ಯ ಶರ್ಟ್ ಕಾಲರ್ನಲ್ಲಿದ್ದ ಟೈಲರ್ ಅಂಗಡಿ ವಿಳಾಸದಿಂದ ಕೇಸ್ ಬಯಲಾಗಿದ್ದು 7 ದಿನಗಳಲ್ಲಿ ಬಾಗೇಪಲ್ಲಿ ಠಾಣೆ ಪೊಲೀಸರು ಹತ್ಯೆ ಪ್ರಕರಣ ಭೇದಿಸಿ ಆರೋಪಿಯನ್ನು ಹಿಡಿದಿದ್ದಾರೆ.

TV9 Kannada


Leave a Reply

Your email address will not be published.