ಉಡುಪಿ: ರಾಜ್ಯಾದ್ಯಂತ ಸೋಮವಾರ ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಜಾರಿಯಾಗಲಿದೆ. ದೇವಸ್ಥಾನ, ಮಠ ಮಂದಿರಗಳನ್ನು ತೆರೆಯಲು ಸರ್ಕಾರ ಗ್ರೀನ್ ​ಸಿಗ್ನಲ್​ ನೀಡಿದೆ. ಈ ಹಿನ್ನೆಲೆ ರಾಜ್ಯದ ಬಹುತೇಕ ದೇಗುಲಗಳು ನಾಳೆಯಿಂದ ಭಕ್ತರಿಗೆ ಪ್ರವೇಶ ನೀಡಲು ಸಿದ್ಧತೆ ಆರಂಭಿಸಿವೆ. ಆದರೆ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಮಾತ್ರ ಇನ್ನೊಂದು ವಾರ ಕಾಯಲೇಬೇಕು.

ನಾಳೆ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಭಕ್ತರಿಗೆ ದರ್ಶನ ಪ್ರಾರಂಭಿಸಲಾಗುತ್ತಿಲ್ಲ. ಸುತ್ತಮುತ್ತಲ ರಾಜ್ಯಗಳ ಚಿತ್ರಣ ನೋಡಿಕೊಂಡು, ಒಂದು ವಾರದ ನಂತರ ಮಠದಲ್ಲಿ ಕೃಷ್ಣನ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶ್ರೀಮಠದ ಪರ್ಯಾಯ ಅದಮಾರು ಈಶ ಪ್ರೀಯ ತೀರ್ಥ ಸ್ವಾಮೀಜಿ ನ್ಯೂಸ್​ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ

The post ಅನ್​ಲಾಕ್​​ ಆದ್ರೂ ಇನ್ನೊಂದು ವಾರ ಉಡುಪಿ ಶ್ರೀಕೃಷ್ಣನ ದರ್ಶನವಿಲ್ಲ appeared first on News First Kannada.

Source: newsfirstlive.com

Source link