ಅನ್​ಲಾಕ್ ಬೆನ್ನಲ್ಲೇ 100ಕ್ಕೂ ಹೆಚ್ಚು ರೌಡಿಶೀಟರ್ಸ್​ ಮನೆ ಮೇಲೆ ಪೊಲೀಸರ ದಾಳಿ

ಅನ್​ಲಾಕ್ ಬೆನ್ನಲ್ಲೇ 100ಕ್ಕೂ ಹೆಚ್ಚು ರೌಡಿಶೀಟರ್ಸ್​ ಮನೆ ಮೇಲೆ ಪೊಲೀಸರ ದಾಳಿ

ಬೆಂಗಳೂರು:  ಲಾಕ್​ಡೌನ್ ಸಡಿಲಿಕೆ ಬೆನ್ನಲ್ಲೇ ನಗರ ಪೊಲೀಸರು ರೌಡಿಶೀಟರ್​​ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ಪೂರ್ವ ವಿಭಾಗದ ರೌಡಿಶೀಟರ್​​ಗಳ ಮನೆ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ.

ಈ ವೇಳೆ ಹಲವರನ್ನ ವಶಕ್ಕೆ ಪಡೆದು ಮೆಡಿಕಲ್ ಚೆಕಪ್ ಮಾಡಿಸ್ತಿದ್ದಾರೆ. ಇವರಲ್ಲಿ ಯಾರಾದ್ರೂ ಗಾಂಜಾ ಸೇವನೆ ಮಾಡಿರೋದು ಕನ್ಫರ್ಮ್ ಆದ್ರೆ IPC ಸೆಕ್ಷನ್ 27B ಅಡಿಯಲ್ಲಿ ಕೇಸ್ ದಾಖಲು ಮಾಡಲಿದ್ದಾರೆ.

ಡಿ.ಜೆ ಹಳ್ಳಿ ರೌಡಿಶೀಟರ್ ಮಜರ್ ಹಾಗೂ ಚಪ್ಪಡಿ ನದೀಮ್, ಗೋವಿಂದಪುರ ರೌಡಿಶೀಟರ್ ವಾಜಿದ್, ಡೈನಾಮಿಕ್ ಖಲೀಲ್ ಸಹಚರ ತೌಸಿಫ್ ಸೇರಿ ನೂರಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆ ಮೇಲೆ ರೇಡ್ ಸೇರಿ ನೂರಕ್ಕೂ ಹೆಚ್ಚು ರೌಡಿಶೀಟರ್ಸ್​ ಮನೆ ಮೇಲೆ ರೇಡ್ ಮಾಡಲಾಗಿದೆ.

ಡಿಜೆ ಹಳ್ಳಿ, ಕೆಜಿಹಳ್ಳಿ, ಶಿವಾಜಿನಗರ ಗೋವಿಂದಪುರ, ಹೆಣ್ಣೂರು, ಬಾಣಸವಾಡಿ, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ  ದಾಳಿ ಮಾಡಲಾಗಿದೆ. ಏರಿಯಾದಲ್ಲಿ ಸೈಲೆಂಟ್ ಆಗಿರಬೇಕು. ಯಾವುದೇ ಹೊಸ ಕೇಸ್ ಮಾಡ್ಬಾರ್ದು ಅಂತ ಪೊಲೀಸರು ರೌಡಿಶೀಟರ್​ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

The post ಅನ್​ಲಾಕ್ ಬೆನ್ನಲ್ಲೇ 100ಕ್ಕೂ ಹೆಚ್ಚು ರೌಡಿಶೀಟರ್ಸ್​ ಮನೆ ಮೇಲೆ ಪೊಲೀಸರ ದಾಳಿ appeared first on News First Kannada.

Source: newsfirstlive.com

Source link