ಬಾಗಲಕೋಟೆ: ನಾಳೆ ರಾಜ್ಯಾದ್ಯಂತ ಅನ್​ಲಾಕ್​​ 3.0 ಸಡಿಲಿಕೆ ಹಿನ್ನೆಲೆಯಲ್ಲಿ ದೇವಸ್ಥಾನಗಳು, ಮಠ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳು ಪ್ರವೇಶ ನೀಡಲು ಸಜ್ಜಾಗಿವೆ.

ಅದೇ ರೀತಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ತ್ರಿವೇಣಿ ಸಂಗಮದ ಸುಕ್ಷೇತ್ರ ಕೂಡಲಸಂಗಮೇಶ್ವರ ದೇವಸ್ಥಾನವೂ ಕೂಡ ಭಕ್ತರಿಗೆ ನಾಳೆಯಿಂದ ದರ್ಶನಕ್ಕೆ ಮುಕ್ತವಾಗಿದ್ದು, ದೇವಸ್ಥಾನದ ಆವರಣದಲ್ಲಿ ಸ್ಚಚ್ಛತಾ ಕಾರ್ಯಗಳು ಭರದಿಂದ ಸಾಗಿವೆ.

ನಾಳೆ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಮಾತ್ರ ಪ್ರವೇಶ ಕಲ್ಪಿಸಿದೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು ಯಾವುದೇ ವಿಶೇಷ ಪೂಜೆ ಮತ್ತು ತ್ರಿವೇಣಿ ನದಿಯಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನ ಪ್ರವೇಶಿಸುವವರಿಗೆ ಮಾಸ್ಕ್, ಸ್ಯಾನಿಟೈಸರ್​ ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂದು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ.

The post ಅನ್​ಲಾಕ್ 3.0: ಪ್ರಸಿದ್ಧ ಕೂಡಲಸಂಗಮೇಶ್ವರ ದೇವಸ್ಥಾನ ನಾಳೆಯಿಂದ ದರ್ಶನಕ್ಕೆ ಮುಕ್ತ appeared first on News First Kannada.

Source: newsfirstlive.com

Source link