ಅನ್​ಸೋಲ್ಡ್​ ಬೆನ್ನಲ್ಲೇ ಧೋನಿ ಬಗ್ಗೆ ರೈನಾ ಮಾತಾಡಿರೋ ಹಳೆ ವಿಡಿಯೋ ವೈರಲ್​​!


ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಮಿಸ್ಟರ್​ ಐಪಿಎಲ್​ ಸುರೇಶ್​ ರೈನಾ ಅನ್​ಸೋಲ್ಡ್​ ಆಗಿರೋದು ಅವರ ಅಭಿಮಾನಿಗಳಿಗೆ ಶಾಕ್​ ನೀಡಿದೆ. ಇನ್​ಫ್ಯಾಕ್ಟ್​ ಈ ಚರ್ಚೆಯಲ್ಲಿ ಧೋನಿ ಹೆಸರು ಕೂಡ ಜೋರಾಗಿ ಕೇಳಿ ಬರ್ತಿದೆ.

ಅನ್​ಕ್ಯಾಪ್ಡ್​​​ ಪ್ಲೇಯರ್​ ಮಿಲೇನಿಯರ್​ ಆಗಿದ್ರಿಂದ ಹಿಡಿದು, ಸ್ಟಾರ್​ ಪ್ಲೇಯರ್​ ಅನ್​ಸೋಲ್ಡ್​​ ಆಗೋದ್ರವರೆಗೂ ಈವರೆಗಿನ IPL​ ಆಕ್ಷನ್​ ಸಾಕ್ಷಿಯಾಗಿದೆ. ಅದರಿಂದ 2 ದಿನಗಳ ಹಿಂದೆ ನಡೆದ ಮೆಗಾ ಹರಾಜು ಪ್ರಕ್ರಿಯೆಯೂ ಹೊರತಾಗಿಲ್ಲ. ಆದ್ರೆ, ಈ ಬಾರಿ ಆದ ಅಚ್ಚರಿ ಅಭಿಮಾನಿಗಳಿಗೆ ಆದ ಶಾಕ್​ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಅನ್​ಸೋಲ್ಡ್​ ಆಗಿದ್ದು ಮಿಸ್ಟರ್​ ಐಪಿಎಲ್​ ಖ್ಯಾತಿಯ ಸುರೇಶ್​ ರೈನಾ!

ರೈನಾ ಅನ್​ಸೋಲ್ಡ್​ ಆಗುತ್ತಿದ್ದಂತೆ ರೈನಾ ಧೋನಿ ಬಗ್ಗೆ ಮಾತನಾಡಿರೋ ಹಳೆಯ ವಿಡಿಯೋ ಇದೀಗ ಭಾರೀ ವೈರಲ್​ ಆಗುತ್ತಿದೆ. ಇದರಲ್ಲಿ ರೈನಾ ‘ಮಹೇಂದ್ರ ಸಿಂಗ್​ ಧೋನಿ ಮುಂದಿನ ಆವೃತ್ತಿಯಲ್ಲಿ ಆಡದಿದ್ದರೆ ನಾನು ಕೂಡ ಆಡಲ್ಲ. ಈ ಸೀಸನ್​ನಲ್ಲಿ ನಾವು ಗೆದ್ದರೆ ಮುಂದಿನ ಸೀಸನ್​ನಲ್ಲಿ ಆಡುವಂತೆ ಅವರನ್ನು ವಿನಂತಿಸಿಕೊಳ್ಳುತ್ತೇನೆ’ ಎಂದು ರೈನಾ ಹೇಳಿದ್ದರು. ಇದೀಗ ಇದೆ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

News First Live Kannada


Leave a Reply

Your email address will not be published. Required fields are marked *