ಬೆಂಗಳೂರು: ಕೊರೊನಾ ಸೋಂಕಿಗೆ ಬ್ರೇಕ್​ ಹಾಕಲು ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್​​ಡೌನ್ ನಿರ್ಬಂಧಗಳಲ್ಲಿ ಹಂತ ಹಂತವಾಗಿ ಸಡಿಲಿಕೆ ಮಾಡುತ್ತಿದ್ದು, ನಾಳೆಯಿಂದ ಸಾಕಷ್ಟು ರಿಲೀಫ್ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್​.​ ಅಶೋಕ್​​ ಹೇಳಿದ್ದಾರೆ.

ಕೋವಿಡ್​​-19 ಸಭೆಯ ಬಳಿಕ ಮಾತನಾಡಿದ ಆರ್​.ಅಶೋಕ್ ಅವರು, ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರ ಹಾಗೂ ರಂಗಮಂದಿರ ತೆರೆಯಲು ಅನುಮತಿ ನೀಡಲಾಗಿದೆ. ದೇವಸ್ಥಾನದಲ್ಲಿ ಭಕ್ತರು ಪೂಜೆ ಮಾಡಲು ಅವಕಾಶ ನೀಡಲು ತೀರ್ಮಾನ ಮಾಡಲಾಗಿದೆ. ಈ ಕುರಿತ ಗೆಜೆಟ್​​ಅನ್ನು ಸರ್ಕಾರಿ ಕಾರ್ಯದರ್ಶಿಗಳು ನೀಡುತ್ತಾರೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ಸಿಎಂ ಬಿಎಸ್​​ವೈ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್-19 ಕುರಿತು ಚರ್ಚೆ ನಡೆಸಿಲು ಸಭೆ ನಡೆಸಿದರು. ಈ ಸಭೆಯಲ್ಲಿ ನೈಟ್ ಕರ್ಫ್ಯೂವನ್ನು ರಾತ್ರಿ 10ರಿಂದ ಬೆಳಗ್ಗೆ 5 ರ ವರಗೆ ವಿಧಿಸಲು ತೀರ್ಮಾನಿಸಲಾಗಿದ್ದು, ಸಿನಿಮಾ ಥಿಯೇಟರ್ ಹಾಗೂ ರಂಗಮಂದಿರದಲ್ಲಿ ಶೇ.50 ರಷ್ಟು ಸೀಟು ಭರ್ತಿಗೆ ಅವಕಾಶ ನೀಡುವುದು. ಉನ್ನತ ಶಿಕ್ಷಣವನ್ನು ಜುಲೈ 26 ರಿಂದ ಪ್ರಾರಂಭ ಮಾಡಲು ಅವಕಾಶ ನೀಡಲು ನಿರ್ಧರಿಸಿದ್ದಾರೆ. ಉನ್ನತ ಶಿಕ್ಷಣ ಕಾಲೇಜು ಆರಂಭವಾದ ಬಳಿಕ ಒಂದು ಡೋಸ್ ವ್ಯಾಕ್ಸಿನ್ ಪಡೆದವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಆಗಮಿಸಲು ಅವಕಾಶ ನೀಡಲಾಗುತ್ತದೆ.

ಉಳಿದಂತೆ ಈ ಹಿಂದೆ ಇದ್ದಂತಹ ನಿರ್ಬಂಧಗಳ ಮುಂದುವರಿಯಲಿದ್ದು, ಸ್ವಿಮ್ಮಿಂಗ್ ಫುಲ್ ಹಾಗೂ ಒಳಾಂಗಣ ಚಿತ್ರೀಕರಣ, ಪಬ್​​ಗಳಿಗೆ ಸರ್ಕಾರ ಅನುಮತಿ ನೀಡಿಲ್ಲ.

ಇನ್ನೂ ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ್, ಸಚಿವ ಆರ್.ಅಶೋಕ್, ಅರವಿಂದ ಲಿಂಬಾವಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಅಮಿತ್ ಪ್ರಸಾದ್, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ರಾಜ್ಯ ಪೊಲೀಸ್ ಮಹಾನಿರ್ದೇಶ ಪ್ರವೀಣ್ ಸೂದ್ ಸೇರಿದಂತೆ ಹಲವರ ಭಾಗಿಯಾಗಿದ್ದರು.

The post ಅನ್​​ಲಾಕ್​​ನಲ್ಲಿ ಇನ್ನಷ್ಟು ರಿಲೀಫ್​​; ನಾಳೆಯಿಂದ ಚಿತ್ರಮಂದಿರ​​.. ಜು.26ರಿಂದ ಕಾಲೇಜ್​ ಓಪನ್​ appeared first on News First Kannada.

Source: newsfirstlive.com

Source link