ಅನ್​​​ಲಾಕ್​​​ 3.0: ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್..? ಥಿಯೇಟರ್​ಗಳು ಓಪನ್ ಆಗಲ್ವಾ..?

ಅನ್​​​ಲಾಕ್​​​ 3.0: ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್..? ಥಿಯೇಟರ್​ಗಳು ಓಪನ್ ಆಗಲ್ವಾ..?

ಬೆಂಗಳೂರು: ರಾಜ್ಯಾದ್ಯಂತ ಮಾರಕ ಕೊರೊನಾ 2ನೇ ಅಲೆಯ ಆರ್ಭಟ ಬಹುತೇಕ ಕಡಿಮೆಯಾದ ಪರಿಣಾಮ ಸಿಎಂ ಬಿ.ಎಸ್.​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾ ಅನ್​​​ಲಾಕ್​​​ 3.0 ಪ್ರಕ್ರಿಯೆ ಶುರು ಮಾಡಲು ಮುಂದಾಗಿದೆ. ಇಂದು ಸಂಜೆ ಸಿಎಂ ನೇತೃತ್ವದಲ್ಲಿ ನಡೆಯಲಿರುವ 3.0 ಅನ್​ಲಾಕ್​ ಸಭೆಯಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ವಿನಾಯ್ತಿ ನೀಡಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಜೂನ್​​​ 5ನೇ ತಾರೀಕು ಅಂದರೆ ಸೋಮವಾರದಿಂದಲೇ ರಾಜ್ಯದಲ್ಲಿ ಇನ್ನಷ್ಟು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಕುರಿತು ಸಿಎಂ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಿನಿಮಾ ಥಿಯೇಟರ್​​ ಹೊರತುಪಡಿಸಿ ಮಾರ್ಕೆಟ್, ಮಾಲ್ ತೆರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗುತ್ತಿದೆ.

ಸಿನಿಮಾ ಥಿಯೇಟರ್​​ ತೆರೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಶುಕ್ರವಾರ ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ನೂರಾರು ಮಂದಿ ಮೂರು ಗಂಟೆಗಳ ಕಾಲ ಒಂದೇ ಕಡೆ ಇರುತ್ತಾರೆ. ಹೀಗಾಗಿ ಥಿಯೇಟರ್ ಓಪನ್ ಸದ್ಯಕ್ಕಿಲ್ಲ ಎಂದಿದ್ದರು. ಏನೇ ಆಗಲೀ ಸಂಜೆ ಸಿಎಂ ಯಡಿಯೂರಪ್ಪ ಕೋವಿಡ್ ಉಸ್ತುವಾರಿ ಸಚಿವರು, ತಜ್ಞರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕೃತ ಮಾಹಿತಿ ಹೊರಹಾಕಲಿದ್ದಾರೆ.

ಆರ್ಥಿಕ ಚಟುವಟಿಕೆ ದೃಷ್ಟಿಯಿಂದ ಎಲ್ಲಾ ಚಟುವಟಿಕೆಗಳನ್ನು ತೆರೆಯಬೇಕಾಗಿದೆ. ಹೀಗಾಗಿ, ಸರ್ಕಾರಕ್ಕೆ ಕೊರೊನಾ ನಿರ್ಬಂಧನೆಯಡಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಬಿಬಿಎಂಪಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದ್ದರಿಂದ ಎಲ್ಲಾ ಕ್ಷೇತ್ರಗಳಿಗೂ ಅನುಮತಿ ನೀಡಿ, ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ನೈಟ್ ಕರ್ಫ್ಯೂ ಮಾತ್ರ ಮುಂದುವರಿಸುವ ಸಾಧ್ಯತೆಯಿದೆ.

ಥಿಯೇಟರ್​ಗಳನ್ನ ತೆರೆಯಲು ಚಿತ್ರರಂಗದ ಮನವಿ

ಚಿತ್ರಮಂದಿರಗಳನ್ನ ತೆರೆಯಲು ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಚಿತ್ರರಂಗ ಮನವಿ ಮಾಡಿದೆ. ಚಿತ್ರರಂಗದ ಮೇಲೆ ಯಾಕೆ ನಿಮಗೆ ಈ ರೀತಿ ಧೋರಣೆ ಎಂದು ಬೇಸರ ಹೊರಹಾಕಿದೆ. ಗುಜರಾತ್​​ನಲ್ಲಿ ಥಿಯೇಟರ್​​ಗಳಿಗೆ ಟ್ಯಾಕ್ಸ್ ಫ್ರೀ ಮಾಡಲಾಗಿದೆ. ಆಂಧ್ರದಲ್ಲಿ ಥಿಯೇಟರ್​​​ ಕರೆಂಟ್ ಬಿಲ್​​​​ಗೆ ವಿನಾಯಿತಿ ನೀಡಲಾಗಿದೆ. ಆದ್ರೆ ಕರ್ನಾಟಕದಲ್ಲಿ ಯಾವುದೇ ಸಹಕಾರ ಸರ್ಕಾರದಿಂದ ಸಿಕ್ತಿಲ್ಲ. ಕಾರ್ಮಿಕರಿಗೆ 3000 ರೂಪಾಯಿ ಹಣ ಕೊಟ್ಟಿದ್ದನ್ನ ಬಿಟ್ಟರೆ ಬೇರೆ ಯಾವ ಪರಿಹಾರವೂ ಬಂದಿಲ್ಲ.. ಕಳೆದ ವರ್ಷ ಆರು ತಿಂಗಳು ಥಿಯೇಟರ್ ಬಂದ್ ಆಗಿದ್ದವು.. ಈ ವರ್ಷವೂ ಕೂಡ ಥಿಯೇಟರ್​​ ಬಂದ್​ ಮಾಡಲಾಗಿದೆ. ಸೂಕ್ತ ನಿಯಮಗಳನ್ನ ಜಾರಿ ಮಾಡಿ ಚಿತ್ರಪ್ರದರ್ಶನಕ್ಕೆ ಅನುಮತಿಗೆ ಚಿತ್ರರಂಗ ಆಗ್ರಹಿಸಿದೆ.

The post ಅನ್​​​ಲಾಕ್​​​ 3.0: ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್..? ಥಿಯೇಟರ್​ಗಳು ಓಪನ್ ಆಗಲ್ವಾ..? appeared first on News First Kannada.

Source: newsfirstlive.com

Source link