ಕೊರೊನಾ ಜೀವ ರಕ್ಷಕ ರೆಮ್​ಡೆಸಿವಿರ್​ ಔಷಧಗಳನ್ನ​​ ಹೊತ್ತ ವಿಮಾನ ಗ್ವಾಲಿಯರ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುವ ವೇಳೆ ಅಪಘಾತಕ್ಕೀಡಾಗಿದೆ.

ತುರ್ತು ಅಗತ್ಯತೆ ಇರುವ ಕೊರೊನಾ ರೋಗಿಗಳ ಚಿಕಿತ್ಸೆಗೆ ನೀಡುವ ರೆಮ್​ಡೆಸಿವಿರ್​ ಔಷಧಗಳನ್ನ ಹೊತ್ತು ಬಂದ ವಿಮಾನ, ವೇಗವಾಗಿ ರನ್​​ವೇಗೆ ಬಡಿದು ಅಪಘಾತಕ್ಕೀಡಾಗಿದೆ. ರಾತ್ರಿ 8.30ರ ವೇಳೆಗೆ ಅಪಘಾತ ನಡೆದಿದೆ. ಇನ್ನು ಈ ವಿಮಾನದಲ್ಲಿ ಪೈಲಟ್​ ಮತ್ತು ಸಹ ಪೈಲಟ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇವರನ್ನ ಮಹಾರಾಜಪುರ ವಾಯುಪಡೆ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

The post ಅಪಘಾತಕ್ಕೀಡಾದ ಜೀವರಕ್ಷಕ ರೆಮ್​ಡೆಸಿವಿರ್ ಹೊತ್ತು ತಂದಿದ್ದ ವಿಮಾನ appeared first on News First Kannada.

Source: newsfirstlive.com

Source link