ಅಪಘಾತದಲ್ಲಿ ಒಂದೇ ಊರಿನ ಏಳು ಸ್ನೇಹಿತರು ದುರ್ಮರಣ! ಕೊಡಗು ಗ್ರಾಮದಲ್ಲಿ ಸೂತಕದ ಛಾಯೆ | Seven friend of Kodagu village died in mysuru road accident


ಅಪಘಾತದಲ್ಲಿ ಒಂದೇ ಊರಿನ ಏಳು ಸ್ನೇಹಿತರು ದುರ್ಮರಣ! ಕೊಡಗು ಗ್ರಾಮದಲ್ಲಿ ಸೂತಕದ ಛಾಯೆ

ಅಪಘಾತದಲ್ಲಿ ಮೃತಪಟ್ಟ ಸ್ನೇಹಿತರು

ಕೊಡಗು: ಒಂದೇ ಊರಿನ ಏಳು ಮಂದಿ ಅಪಘಾತದಲ್ಲಿ (Accident) ಮೃತಪಟ್ಟಿದ್ದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮದುವೆಗೆ (Marriage) ಎಂದು ಮೈಸೂರಿಗೆ ಹೋದ ಏಳು ಮಂದಿ ಸ್ನೇಹಿತರು ಹೆಣವಾಗಿ ಊರಿಗೆ ಮರಳಿದ್ದಾರೆ. ಅಪಘಾತಕ್ಕೆ ಒಳಗಾದವರೆಲ್ಲರೂ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮಸ್ಥರು. ಇವರ ಅಗಲಿಕೆಯಿಂದ ಇಡೀ ಗ್ರಾಮ ದಿಗ್ಭ್ರಾಂತಿಗೆ ಒಳಗಾಗಿದೆ. ಸಾವನ್ನಪ್ಪಿದವರನ್ನು ಒಂದೇ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಪಾಲಿಬೆಟ್ಟ ಗ್ರಾಮದ ಫಿಲಿಪ್ ಎಂಬುವರ ಪುತ್ರ ಜಾನಿಯ ವಿವಾಹ ಹುಣಸೂರಿನಲ್ಲಿ ನಿನ್ನೆ (ಏಪ್ರಿಲ್ 20) ಆಯೋಜನೆಯಾಗಿತ್ತು. ಸಂತೋಷ್, ವಿನೀದ್, ಎಂಆರ್ ಅನಿಲ್, ರಾಜೇಶ್, ದಯಾನಂದ್ ಮತ್ತು ಬಾಬು ಒಂದೇ ಜೀಪಿನಲ್ಲಿ ತೆರಳಿದ್ದರು. ಮದುವೆಯಲ್ಲಿ ಎಂಜಾಯ್ ಮಾಡಿ ಊಟದ ಬಳಿಕ ಮಧ್ಯಾಹ್ನ ಮೂರು ಗಂಟೆಗೆ ಮರಳಿ ಪಾಲಿಬೆಟ್ಟಕ್ಕೆ ಹೊರಟಿದ್ದಾರೆ. ಮಧುಮಗ ಜಾನಿಯ ತಂದೆ ಫಿಲಿಪ್ ಕೂಡ ಇವರ ಜೊತೆ ಇದ್ದರು. ಅಲ್ಲಿಂದ ಹೊರಟ ಅರ್ಧ ಗಂಟೆಯಲ್ಲೇ ದುರ್ಘಟನೆ ಸಂಭವಿಸಿದೆ. ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಫಿಲಿಪ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

TV9 Kannada


Leave a Reply

Your email address will not be published.