ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ‘ಬಚ್ ಪನ್ ಕಾ ಪ್ಯಾರ್’ ಖ್ಯಾತಿಯ ಹುಡುಗ ಸಂಪೂರ್ಣ ಗುಣಮುಖ


ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ ‘ಬಚ್​ಪನ್​ ಕಾ ಪ್ಯಾರ್ ಹೇ’ ಖ್ಯಾತೀಯ 10 ವರ್ಷ ಸಹದೇವ್​ ದಿರ್ಡೋಲ್​ ಈಗ ಗುಣಮುಖನಾಗಿದ್ದಾನೆ.

ಸಹದೇವ್​ ಆಕ್ಸಿಡೆಂಡ್ ಸುದ್ದಿ ಕೇಳುತ್ತಿದಂತೆ ಆತನ ಅಭಿಮಾನಿಗಳು ಆದಷ್ಟು ಬೇಗ ಸಹದೇವ್​ ಗುಣಮುಖನಾಗಿ ವಾಪಸ್​ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಆದಾದ ನಂತರ ಸಹದೇವ್​ಗೆ ಚಿಕತ್ಸೆ ನೀಡುತ್ತಿದ್ದ ವೈದ್ಯರು ಆತ ಆರೋಗ್ಯವಾಗಿದ್ದು ಯಾವುದೇ ಪ್ರಾಣಾಪಾಯ ಇಲ್ಲ ಎಂಬ ಮಾತಿಹಿ ನೀಡಿದ್ದರು.

ಆದರಂತೇ ಇದೀಗ ಸಹದೇವ್​ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಪೋಸ್ಟ್​ ಮಾಡುವ ಮೂಲಕ ತಾನು ಗುಣಮುಖನಾಗಿದ್ದಾನೆ ಎಂದು ಹೇಳಿಕೊಂಡಿದ್ದಾನೆ.” ನಮಸ್ಕಾರ ನಾನು ಸಹದೇವ್​.. ನಾನು ಈಗ ಸಂಪೂರ್ಣವಾಗಿ ಗುಣಮುಖನಾಗಿ ಬಂದಿದ್ದೇನೆ. . ನಿಮ್ಮಲ್ಲರ ಪಾರ್ಥನೆಗಾಗಿ ಧನ್ಯವಾದಗಳು. ನನಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ಧನ್ಯವಾದಗಳು ಅಂತ ಸಹದೇವ್​ ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *