ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌ ನೆರವಾಗಿದ್ದಾರೆ.

ಕನಕಪುರದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆ ಕಗ್ಗಲೀಪುರದಲ್ಲಿ ರಸ್ತೆ ಮಧ್ಯೆ. ಸಂಸದ ಡಿ.ಕೆ.ಸುರೇಶ್ ಕಣ್ಮುಂದೆಯೇ ಅಪಘಾತಾಗಿದೆ. ಕಾರೊಂದು ಅಂಗವಿಕಲ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಅಂಗವಿಕಲ ವ್ಯಕ್ತಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾರೆ. ಅಂಗವಿಕಲ ವ್ಯಕ್ತಿ, ಕನಕಪುರದ ಕೋಟೆ ನಿವಾಸಿಯಾಗಿದ್ದು ಜಯರಾಮು ಶಿವಲಿಂಗಯ್ಯ ಎಂಬುವವರ ಪುತ್ರ. ಇದನ್ನೂ ಓದಿ: ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಡಿ.ಕೆ ಶಿವಕುಮಾರ್ 

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಂಸದ ಡಿ.ಕೆ.ಸುರೇಶ್ ನೀರು ಕುಡಿಸಿ ಸಂತೈಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಸ್ಕಾಂಗೆ ಸಂಬಂಧಿಸಿದ ವಾಹನದಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ನಂತರ ಕಗ್ಗಲೀಪುರ ಪೊಲೀಸ್ ಠಾಣೆಗೆ ಹೋಗಿ ಸ್ವತಃ ಸಂಸದ ಡಿ.ಕೆ.ಸುರೇಶ್ ಅಪಘಾತದ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

The post ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಂಸದ ಡಿ.ಕೆ. ಸುರೇಶ್ appeared first on Public TV.

Source: publictv.in

Source link