ಮೈಸೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯ ಗೊಂಡಿದ್ದ ರೈತನ ಅಂಗಾಂಗಳನ್ನು ದಾನ ಮಾಡಿ  ಕುಟುಂಬವೊಂದು ಸಾರ್ಥಕ ಸೇವೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ರೈತ ರಾಮಕೃಷ್ಣ (50) ಎಂಬವರು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಜ್ಜಹಳ್ಳಿ ನಿವಾಸಿಯಾಗಿದ್ದ ರಾಮಕೃಷ್ಣ ಅವರು ಶ್ರೀರಂಗಪಟ್ಟಣ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದರು. ಅಪಘಾತದ ತೀವ್ರತೆಗೆ ರಾಮಕೃಷ್ಣ ಅವರ ಮೆದುಳು ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಮಾರ್ಗದರ್ಶನ ಪಡೆದ ರಾಮಕೃಷ್ಣ ಅವರ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು.ಗ್ರೀನ್ ಕಾರಿಡಾರ್ ಮೂಲಕ ರಾಮಕೃಷ್ಣರನ್ನು ಬೆಂಗಳೂರಿಗೆ ರವಾನೆ
ಅಂಗಾಂಗ ದಾನಕ್ಕೆ ರಾಮಕೃಷ್ಣ ಅವರ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರನ್ನು ಆ್ಯಂಬುಲೆನ್ಸ್ ಮೂಲಕ ಮೈಸೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಇದಕ್ಕಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಮಕೃಷ್ಣ ಅವರಿಂದ ಕಿಡ್ನಿ, ಲಿವರ್ ಸೇರಿದಂತೆ ವಿವಿಧ ಅಂಗಾಂಗಳನ್ನು ವೈದ್ಯರು ಪಡೆದುಕೊಳ್ಳಲಿದ್ದಾರೆ. ಖಾಸಗಿ ಮಾಲೀಕತ್ವದ ಆ್ಯಂಬುಲೆನ್ಸ್ ಚಾಲನ ದರ್ಶನ್​ ಎಂಬವರು ರಾಮಕೃಷ್ಣ ಅವರ ದೇಹವನ್ನು ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

The post ಅಪಘಾತದಲ್ಲಿ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ರೈತ appeared first on News First Kannada.

Source: newsfirstlive.com

Source link