ಅಪಘಾತದಲ್ಲಿ ಸಹಾಯಕ್ಕಾಗಿ ಮಹಿಳೆ ಮನವಿ, ಮಾನವೀಯತೆ ಮರೆತ ಜನ -ಸ್ಥಳದಲ್ಲೇ ಹೋಯ್ತು 2 ಜೀವ

ಬೆಂಗಳೂರು: ಟಿಪ್ಪರ್​ ಮತ್ತು ಬೈಕ್​ ನಡುವೆ ನಡೆದ ಭೀಕರ ಅಪಘಾತದಲ್ಲಿ ತಾಯಿ, ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಎಚ್​​ಎಎಲ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಶ್ರೀದೇವಿ (21) ಒಂದು ವರ್ಷದ ಗಂಡು ಮಗುವಿನ ಜೊತೆ ಮೃತಪಟ್ಟಿದ್ದಾರೆ. ಕೆ.ಆರ್. ಪುರಂ ನಿಂದ ಧರ್ಮಪುರಿಗೆ ರಾಯಲ್​ ಎನ್​ಫೀಲ್ಡ್ ಬೈಕ್ ನಲ್ಲಿ ದಂಪತಿ ಮತ್ತು ಮಗು ಹೋಗುವಾಗ ಮಾರತ್ ಹಳ್ಳಿಯ ರಿಂಗ್ ರೋಡ್ ನಲ್ಲಿ ಹಿಂಬದಿಯಿಂದ ಟಿಪ್ಪರ್ ಗುದ್ದಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೂಡಲೇ ಬೈಕ್​ನಿಂದ ತಾಯಿ, ಮಗು ಕೆಳಗೆ ಬಿದ್ದಿದ್ದು ಅವರ ಮೇಲೆ ಟಿಪ್ಪರ್​ ಹರಿದು ಅಸುನೀಗಿದ್ದಾರೆ.

ಅಪಘಾತದಲ್ಲಿ ಬೈಕ್​ ಓಡಿಸುತ್ತಿದ್ದ ಪತಿ ಅದೃಷ್ವವಶಾತ್​ ಎಡಕ್ಕೆ ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಮೃತ ಮಹಿಳೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಕೂಡ ಸಹಾಯಕ್ಕೆ ಧಾವಿಸದೇ ಜನರು ಮಾನವೀಯತೆ ಮರೆತು ವರ್ತಿಸಿದ್ದಾರೆ ಎನ್ನಲಾಗಿದೆ. ಅಪಘಾತದ ಬಳಿಕ ಚಾಲಕ ಟಿಪ್ಪರ್​ ಅಲ್ಲೇ ಬಿಟ್ಟು ಪರಾರಿಯಾಗಿದ್ದು ಎಚ್​ಎಎಲ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

News First Live Kannada

Leave a comment

Your email address will not be published. Required fields are marked *