ಬೆಂಗಳೂರು: ಅಪಘಾತವಾಗಲಿಕ್ಕೆ ಗೆಳೆಯ ನವೀನ್ ಕಾರಣ ಎಂದು ನಟ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ವಿಜಯ್ ಸಹೋದರ ಸಿದ್ದೇಶ್ ಕುಮಾರ್​ ಅವರು ದೂರು ನೀಡಿದ್ದಾರೆ. ಈ ದೂರಿನಲ್ಲಿ ನನ್ನ ಸಹೋದರ ವಿಜಯ್​ನನ್ನು ಬೈಕ್​ನಲ್ಲಿ ಹಿಂದೆ ಕೂರಿಸಿಕೊಂಡು, ಜೆಪಿನಗರ 7ನೇ ಫೇಸ್​ ರಸ್ತೆಯಲ್ಲಿ ವೇಗವಾಗಿ, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಬೈಕ್ ಸವಾರಿ ಮಾಡಿಕೊಂಡು ಹೋಗಿದ್ದಾರೆ.

ಹೀಗಾಗಿ ಸ್ವಯಂ ನಿಯಂತ್ರಣ ತಪ್ಪಿ ಸ್ಕಿಡ್ ಅಂಡ್ ಫಾಲ್ ಆದ ಪರಿಣಾಮ ಇಬ್ಬರು ವಾಹನ ಸಮೇತ ಕೆಳಗೆ ಬಿದ್ದಿದಾರೆ. ಈ ವೇಳೆ ಸಂಚಾರಿ ವಿಜಯ್​ಗೆ ತಲೆಗೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಗಿದೆ. ನಂತರ ಅವರನ್ನು ಬನ್ನೆರುಘಟ್ಟದ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ರಾತ್ರಿಯೇ ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹೀಗಾಗಿ ಅಪಘಾತಕ್ಕೆ ಕಾರಣನಾದ ನವೀನ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಸಿದ್ದೇಶ್ ದೂರಿನನ್ವಯ ನವೀನ್ ಮೇಲೆ ಜಯನಗರ ಸಂಚಾರಿ ಠಾಣೆಯಲ್ಲಿ FIR ಕೂಡ ದಾಖಲಿಸಿಕೊಂಡಿದ್ದಾರೆ.

The post ಅಪಘಾತವಾಗಲು ಗೆಳೆಯ ನವೀನ್​ ಕಾರಣ -ಸಂಚಾರಿ ವಿಜಯ್ ಸಹೋದರ appeared first on News First Kannada.

Source: newsfirstlive.com

Source link