ಶಿವಮೊಗ್ಗ: ಅಪಘಾತ ಸಂಭವಿಸಿ, ರಕ್ತದ ಮಡುವಿನಲ್ಲಿದ್ದ ಯುವತಿಯೊಬ್ಬರಿಗೆ ನೆರವಾಗುವ ಮೂಲಕ ಸಾಗರ ಶಾಸಕ ಹರತಾಳು ಹಾಲಪ್ಪ ಮಾನವೀಯತೆ ಮೆರೆದಿದ್ದಾರೆ.

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಪಲ್ಲವಿ ಜೈನ್ ಎಂಬ ಯುವತಿ ತನ್ನ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ರು. ಸೊರಬ ಮಾರ್ಗವಾಗಿ ಸಂಚರಿಸುವಾಗ ಲಿಂಗದಹಳ್ಳಿ ಕ್ರಾಸ್ ಸಮೀಪದಲ್ಲಿ ಅವರ ಕಾರ್​ ಅಪಘಾತಕ್ಕೀಡಾಗಿದೆ. ಇದರಿಂದ ಪಲ್ಲವಿ ಅವರ ತಲೆಗೆ ಏಟಾಗಿ, ರಕ್ತಸ್ರಾವವಾಗುತ್ತಿತ್ತು.

ಈ ವೇಳೆ ಶಾಸಕ ಹಾಲಪ್ಪ ಸ್ಥಳೀಯರ ಸಹಾಯದಿಂದ ಯುವತಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಶಾಸಕರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

The post ಅಪಘಾತವಾಗಿ ರಕ್ತದ ಮಡುವಲ್ಲಿದ್ದ ಯುವತಿಗೆ ನೆರವು, ಮಾನವೀಯತೆ ಹರತಾಳು ಹಾಲಪ್ಪ ಮೆರೆದ appeared first on News First Kannada.

Source: newsfirstlive.com

Source link