ಅಪಘಾತ ಪ್ರಕರಣದ ಅಪರಾಧಿ 14 ವರ್ಷಗಳ ಬಳಿಕ ವಿಜಯನಗರ ಪೊಲೀಸರ ಬಲೆಗೆ | Vijayanagar Police arrested the perpetrator of the accident after 14 years


ಅಪಘಾತ ಪ್ರಕರಣದ ಅಪರಾಧಿ 14 ವರ್ಷಗಳ ಬಳಿಕ ವಿಜಯನಗರ ಪೊಲೀಸರ ಬಲೆಗೆ

ಬಂಧಿತ ಅಪರಾಧಿ ಮತಿವಣ್ಣನ್

ಬೆಂಗಳೂರು: ಅಪಘಾತ ಪ್ರಕರಣದ ಅಪರಾಧಿ ಸುಮಾರು 14 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತ್ರಿಪುರಾ ಮೂಲದ ಮತಿವಣ್ಣನ್ ಎಂಬಾತ ಬಂಧಿತ ಅಪರಾಧಿ. 2005ರಲ್ಲಿ ಅಪಘಾತ ಪ್ರಕರಣದಲ್ಲಿ ಮತಿವಣ್ಣನ್ ಬಂಧಿತನಾಗಿದ್ದ. ವಿಜಯನಗರ ಸಂಚಾರಿ ಪೊಲೀಸರು ಬಂಧಿಸಿದ್ದರು. ನಂತರ ಮತಿವಣ್ಣನ್ ಜಾಮೀನು ಪಡೆದಿದ್ದ. ಜಾಮೀನು ಸಿಕ್ಕ ನಂತರ ಎಸ್ಕೇಪ್ ಆಗಿದ್ದ. 2007ರಲ್ಲಿ ಆರೋಪ ಸಾಬೀತಾಗಿ ಮತಿವಣ್ಣನ್​ಗೆ ಒಂದು ವರ್ಷ ಜೈಲು ಶಿಕ್ಷೆಯಾಗಿತ್ತು. 2007ರಿಂದ ನಾಪತ್ತೆಯಾಗಿದ್ದ ಮತಿವಣ್ಣನ್ 14 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಸದ್ಯ ಅರೆಸ್ಟ್ ಆಗಿದ್ದಾನೆ.

ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ ಐವರು ಅರೆಸ್ಟ್
ಪಟಾಕಿ ಅಂಗಡಿಗೆ ಹೋಗಿ ಲಾಂಗ್ ಬೀಸಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೌತಮ್, ವಿಕ್ರಮ್, ವೀರಮಣಿ, ಅಜಿತ್ ಬಂಧಿತ ಆರೋಪಿಗಳು. ನ.3ರ ತಡರಾತ್ರಿ ಬುಲ್ ಟೆಂಪಲ್ ರಸ್ತೆಯಲ್ಲಿರುವ ಪಟಾಕಿ ಅಂಗಡಿಗೆ ತೆರಳಿದ್ದ ಐವರ ಗ್ಯಾಂಗ್ ಪಟಾಕಿ ಖರೀದಿ ವೇಳೆ ಮಾಲೀಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಪಟಾಕಿ ಅಂಗಡಿ ಮಾಲೀಕ ಮಧುಗೆ ಗಂಭೀರ ಗಾಯವಾಗಿತ್ತು. ಈ ಬಗ್ಗೆ ಕೆ.ಜಿ.ನಗರ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಾಗಿತ್ತು. ದೂರು ಆಧರಿಸಿ ಐವರು ಆರೋಪಿಗಳನ್ನ ಕೆಜಿ ನಗರ ಪೊಲೀಸರು ಬಂಧಿಸಿದ್ದಾರೆ.

ದರೋಡೆಗೆ ಯತ್ನಿಸಿದ್ದ ಆರೋಪಿ ಸೆರೆ
ಪೆಟ್ರೋಲ್ ಬಂಕ್ನಲ್ಲಿ ದರೋಡೆಗೆ ಯತ್ನಿಸಿದ್ದ ಆರೋಪಿ ಸೆರೆಯಾಗಿದ್ದಾನೆ. ಬೆಂಗಳೂರಿನಲ್ಲಿ ಆರೋಪಿ ಆಜಂನನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರ ಪೆಟ್ರೋಲ್ ಬಂಕ್​ನಲ್ಲಿ ಆರೋಪಿಗಳು ಬೈಕ್​ನಲ್ಲಿ ಬಂದು ದರೋಡೆಗೆ ಯತ್ನಿಸಿದ್ದರು. 3 ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಇಬ್ಬರು ಆರೋಪಿಗಳ ಪೈಕಿ ಓರ್ವ ಅರೆಸ್ಟ್ ಆಗಿದ್ದಾನೆ. ಸದ್ಯ ಬ್ಯಾಟರಾಯನಪುರ ಪೊಲೀಸರಿಂದ ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ.

ನಕಲಿ ಸರ್ಫ್ ಎಕ್ಸೆಲ್ ತಯಾರಿಸುತ್ತಿದ್ದ ನಾಲ್ವರ ಬಂಧನ
ಬೆಂಗಳೂರಿನ ಹನುಮಂತನಗರದಲ್ಲಿ ಸಿಸಿಬಿ ಪೊಲೀಸರು ನಕಲಿ ಸರ್ಫ್ ಎಕ್ಸೆಲ್ ತಯಾರಿಸುತ್ತಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಉತ್ತಮ್ಸಿಂಗ್, ತನ್ಸಿಂಗ್, ಮೋದರಾಮ್ ಹಾಗೂ ಜಾಲಂ ಸಿಂಗ್ ರಾಥೋಡ್ ಎಂಬುವವನ್ನು ಸಿಸಿಬಿ ತಂಡ ಬಂಧಿಸಿದೆ. ಹನುಮಂತನಗರ ವ್ಯಾಪ್ತಿಯ ಮನೆಯೊಂದರಲ್ಲಿ ಇವರು ನಕಲಿ ಸರ್ಫ್ ಎಕ್ಸೆಲ್ ತಯಾರಿಸುತ್ತಿದ್ದರು. 13,080 ನಕಲಿ ಸರ್ಫ್ ಎಕ್ಸೆಲ್ ಪ್ಯಾಕ್ ಮತ್ತು ಮಷೀನ್ ವಶಕ್ಕೆ ಪಡೆಯಲಾಗಿದೆ.

ಬೆಟ್ಟಿಂಗ್​ನಲ್ಲಿ ತೊಡಗಿದ್ದ ಆರೋಪಿ ಸೆರೆ
ಟಿ20 ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಆರೋಪಿಯನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಆರೋಪಿಯನ್ನು ಬಂಧಿಸಿ ಸಿಸಿಬಿ ಪೊಲೀಸರು ಸುಮಾರು 3.5 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

ಅಪಘಾತ ಪ್ರಕರಣದ ಅಪರಾಧಿ 14 ವರ್ಷಗಳ ಬಳಿಕ ಪೊಲೀಸರ ಬಲೆಗೆ
ಬೆಂಗಳೂರು: ಅಪಘಾತ ಪ್ರಕರಣದ ಅಪರಾಧಿ ಸುಮಾರು 14 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತ್ರಿಪುರಾ ಮೂಲದ ಮತಿವಣ್ಣನ್ ಎಂಬಾತ ಬಂಧಿತ ಅಪರಾಧಿ. 2005ರಲ್ಲಿ ಅಪಘಾತ ಪ್ರಕರಣದಲ್ಲಿ ಮತಿವಣ್ಣನ್ ಬಂಧಿತನಾಗಿದ್ದ. ವಿಜಯನಗರ ಸಂಚಾರಿ ಪೊಲೀಸರು ಬಂಧಿಸಿದ್ದರು. ನಂತರ ಮತಿವಣ್ಣನ್ ಜಾಮೀನು ಪಡೆದಿದ್ದ. ಜಾಮೀನು ಸಿಕ್ಕ ನಂತರ ಎಸ್ಕೇಪ್ ಆಗಿದ್ದ. 2007ರಲ್ಲಿ ಆರೋಪ ಸಾಬೀತಾಗಿ ಮತಿವಣ್ಣನ್ಗೆ ಒಂದು ವರ್ಷ ಜೈಲು ಶಿಕ್ಷೆಯಾಗಿತ್ತು. 2007ರಿಂದ ನಾಪತ್ತೆಯಾಗಿದ್ದ ಮತಿವಣ್ಣನ್ 14 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಸದ್ಯ ಅರೆಸ್ಟ್ ಆಗಿದ್ದಾನೆ.

ಇದನ್ನೂ ಓದಿ

ಬಿಟ್​ಕಾಯಿನ್ ಅಂದ್ರೆ ಏನು ಅಂತಾನೆ ನನಗೂ ಗೊತ್ತಿಲ್ಲ, ನನ್ನ ಮಗ ದರ್ಶನನಿಗೂ ಗೊತ್ತಿಲ್ಲ: ರುದ್ರಪ್ಪ ಲಮಾಣಿ

ರೈತರು, ಮಹಿಳೆಯರ ಮೇಲೆ ಪೊಲೀಸರ ದಬ್ಬಾಳಿಕೆ; ಮಗುವಿನೊಂದಿಗೆ ಬಂದಿದ್ದ ಮಹಿಳೆಯನ್ನೂ ಎಳೆದಾಡಿ ರೈತರನ್ನು ವಶಕ್ಕೆ ಪಡೆದ ಖಾಕಿ

TV9 Kannada


Leave a Reply

Your email address will not be published. Required fields are marked *