ರಾಯಚೂರು: ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರಗಳನ್ನ ಮಾಡುತ್ತಿರುವ ಹಿನ್ನೆಲೆ ರಾಯಚೂರು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಗರಂ ಆಗಿದ್ದಾರೆ.

ವ್ಯಾಕ್ಸಿನೇಷನ್‌ ಬಗ್ಗೆ ಜಿಲ್ಲೆಯ ಜನ ಇನ್ನೂ ಆತಂಕದಲ್ಲೇ ಇದ್ದಾರೆ. ಹೀಗಾಗಿ ಅಪಪ್ರಚಾರಕ್ಕೊಳಗಾದ ಜನರ ಮುಖಂಡರ ಮೂಲಕವೇ ಅರಿವು ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ. ಆಯಾ ಜಾತಿಯ ಧರ್ಮ ಗುರುಗಳಿಗೆ ಮೊದಲು ಲಸಿಕೆ ನೀಡುವ ಮೂಲಕ ಜಾಗೃತಿ ಮೂಡಿಸಲು ನಿರ್ಧರಿಸಿದೆ.

ಹಳ್ಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಧರ್ಮಗುರುಗಳಿಗೆ ಲಸಿಕೆ ನೀಡಲಾಗುತ್ತದೆ. ಧರ್ಮಗುರುಗಳ‌ ಮಾತು ಕೇಳಿಯಾದ್ರೂ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ಜನತೆಗೆ ಮನವಿ ಮಾಡಿದ್ದಾರೆ.

The post ಅಪಪ್ರಚಾರಗಳಿಗೆ ರಾಯಚೂರು ಡಿಸಿ ಗರಂ: ಧರ್ಮಗುರುಗಳಿಗೆ ಮೊದಲು ಲಸಿಕೆ ನೀಡಿ ಜಾಗೃತಿ appeared first on News First Kannada.

Source: newsfirstlive.com

Source link